6:05 PM Wednesday 15 - October 2025

ಪಿಎಸ್ ಐ ಹಗರಣ:  ಅಶ್ವಥ್ ನಾರಾಯಣ ಸಂಬಂಧಿಕನಿಗೆ 5ನೇ ರ‍್ಯಾಂಕ್!

ashwath narayan
04/05/2022

ಬೆಂಗಳೂರು : PSI ಹಗರಣದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ  5ನೇ ರ‍್ಯಾಂಕ್ ಪಡೆದ ದರ್ಶನ್ ಗೌಡ  ಮತ್ತು ನಾಗೇಶ್ ಗೌಡ ಇಬ್ಬರು ಸಚಿವ ಅಶ್ವತ್ಥ ನಾರಾಯಣ್ ಅವರ ಸಂಬಂಧಿಕರು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ದರ್ಶನ್ ಗೌಡ ಮೊದಲ ಪೇಪರ್ ನಲ್ಲಿ 50ಕ್ಕೆ 19 ಅಂಕಗಳು ಬಂದಿದೆ. ಎರಡನೆ ಪೇಪರ್ ನಲ್ಲಿ 150 ಕ್ಕೆ 141 ಅಂಕಗಳು ಬಂದಿವೆ. ಬರೆಯುವುದರಲ್ಲಿ ದಡ್ಡ, ಬಹು ಆಯ್ಕೆಯಲ್ಲಿ ಜಾಣ ಆಗಿದ್ದೇಗೆ? ನಾಗೇಶ್ ಗೌಡ 150 ಅಂಕಕ್ಕೆ 137.87 ಗಳಿಸಿದ್ದಾನೆ ಎಂದು ಹೇಳಿದ್ದಾರೆ.

ಉಳಿದವರನ್ನು ಅರೆಸ್ಟ್ ಮಾಡಿ ,ದರ್ಶನ್ ಗೌಡ, ನಾಗೇಶ್ ಗೌಡರನ್ನು ವಿಚಾರಣೆಗೆ ಕರೆದು  ಬಿಟ್ಟು ಕಳುಹಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಪಿಎಸ್‌ ಐ ಪ್ರಕರಣದಲ್ಲಿ 300 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಮಾಹಿತಿ ಇದೆ. ಇದನ್ನು ಸಿಐಡಿಯಿಂದ ತನಿಖೆ ನಡೆಸುತ್ತಿದ್ದಾರೆ‌. ಸಿಐಡಿಯಿಂದ ನ್ಯಾಯ ಸಿಗುವುದಿಲ್ಲ. ಆದುದರಿಂದ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ!

ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ: ಓರ್ವ ಯುವಕ ಸಾವು,  ಮತ್ತೋರ್ವ ಗಂಭೀರ

ಭೀಕರ ಅಪಘಾತಕ್ಕೆ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿ

ಯುವತಿಯ ಮೇಲೆ ಅತ್ಯಾಚಾರ: ಬಾಡಿ ಬಿಲ್ಡರ್ ನ ಬಂಧನ

ಡ್ರೋಣ್ ಮೂಲಕ ಆಹಾರ ವಿತರಿಸಲು ಮುಂದಾದ ಸ್ವಿಗ್ಗಿ!

ಇತ್ತೀಚಿನ ಸುದ್ದಿ

Exit mobile version