3:45 AM Thursday 16 - October 2025

ಪುನೀತ್ ಸಾವನ್ನು ಅವಹೇಳನ ಮಾಡಿದ ಕಿಡಿಗೇಡಿ ಅರೆಸ್ಟ್!

arrest
02/11/2021

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನದ ಸಂದರ್ಭದಲ್ಲಿ ಬಾರ್ ಬಂದ್ ಮಾಡಿರುವುದಕ್ಕೆ ಆಕ್ರೋಶಗೊಂಡ ಉತ್ತರ ಭಾರತ ಮೂಲದ ಕಿಡಿಗೇಡಿಯೋರ್ವ ಪುನೀತ್ ಅವರ ಬಗ್ಗೆ ಅವಹೇಳನಾಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ಯ ಬ್ಯಾನ್ ಆಗಿದ್ದರೂ ಮದ್ಯದ ಬಾಟಲಿ ಖರೀದಿಸಿದ್ದ ಕಿಡಿಗೇಡಿ, ಈ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ನಾವು ಮದ್ಯ ಸೇವನೆ ಮಾಡಿ ಆತನ ಸಮಾಧಿ ಮೇಲೆ ****ಮಾಡುತ್ತೇವೆ ಎಂದು ವಿಕೃತವಾಗಿ ಪೋಸ್ಟ್ ಮಾಡಿದ್ದ.

ಈತನ ವಿಕೃತ ಪೋಸ್ಟ್ ವಿರುದ್ಧ ಕಿಚ್ಚ ಸುದೀಪ್ ಪುತ್ರಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸರು ಉತ್ತರ ಭಾರತದ ಮೂಲದ ಕಿಡಿಗೇಡಿಯನ್ನು ಬಂಧಿಸಿದ್ದಾರೆ.

ಒಬ್ಬ ವ್ಯಕ್ತಿಯ ಸಾವಿಗೆ ಸಂಭ್ರಮಿಸುವ ಸಂಸ್ಕೃತಿ ಕರ್ನಾಟಕದಲ್ಲ. ಆದರೆ, ಉತ್ತರ ಭಾರತದ ಸಂಸ್ಕೃತಿಗಳು ಕರ್ನಾಟಕಕ್ಕೂ ಬಂದಿದೆ. ಹಲವು ಗಣ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಸಾವಿಗೆ ಕರ್ನಾಟಕದಲ್ಲಿರುವ ಕೆಲವು ವಿಕೃತರು ಕೂಡ ಸಂಭ್ರಮ ವ್ಯಕ್ತಪಡಿಸಿರುವ ಘಟನೆಗಳು ನಡೆದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version