11:28 AM Friday 12 - December 2025

ಇನ್ನು ರೈಲಿನಲ್ಲೂ ಜನ ಪ್ರಯಾಣಿಸೋ ಹಾಗಿಲ್ಲ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!

25/02/2021

ನವದೆಹಲಿ: ದೇಶದ ಜನರಿಗೆ ಬೆಲೆ ಏರಿಕೆಗಳ ಮೇಲೆ ಬೆಲೆ ಏರಿಕೆಯ ಶಾಕ್ ಗಳು ದೊರೆಯುತ್ತಿದ್ದು, ಇದೀಗ ಲೋಕಲ್ ಪ್ಯಾಸೆಂಜರ್ ರೈಲು ಟಿಕೆಟ್ ನ ದರವನ್ನು ಏರಿಕೆ ಮಾಡಲು ರೈಲ್ವೇ ಇಲಾಖೆ ನಿರ್ಧಿಸಿದೆ.

ಕೊರೊನಾದ ಕಾರಣ ಹೇಳಿ ರೈಲ್ವೇ ಟಿಕೆಟ್ ದರವನ್ನು ಇಲಾಖೆಯು ಏರಿಕೆ ಮಾಡಿದೆ. ಸ್ಥಳೀಯವಾಗಿ ರೈಲಿನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಇದರಿಂದ ಕೊರೊನಾ ಹರಡುತ್ತದೆ. ಜನರ ಸಂಖ್ಯೆಯನ್ನು ಕಡಿಮೆ ಮಾಡಲು ಟಿಕೆಟ್ ದರ ಏರಿಕೆ ಮಾಡುತ್ತಿದ್ದೇವೆ ಎಂದು ಇಲಾಖೆಯು ಹೇಳಿದೆ.

30ರಿಂದ 40 ಕಿ.ಮೀ.  ಪ್ರಯಾಣದ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವಾಲಯ ಅವೈಜ್ಞಾನಿಕ, ಅಸಮರ್ಥ ಹೇಳಿಕೆಯನ್ನು ನೀಡಿದೆ. ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವುದಿದ್ದರೆ, ರೈಲುಗಳ ಬೋಗಿ ಹೆಚ್ಚಿಸುವ ಬಗ್ಗೆ ಚಿಂತಿಸಬೇಕೇ ಹೊರತು, ಟಿಕೆಟ್ ದರ ಏರಿಕೆ ಮಾಡುವುದು ಯಾವ ರೀತಿಯ ಕ್ರಮ ಎಂದು ಜನ ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version