3:38 AM Saturday 18 - October 2025

ಗ್ರಾ.ಪಂ ಚುನಾವಣೆ: ತನ್ನ ಸೊಸೆಯ ಪರ ಪ್ರಚಾರಕ್ಕೆ ಕೋಲು ಹಿಡಿದು ಬೀದಿಗಿಳಿದ 80ರ ವೃದ್ಧೆ!

19/11/2020

ಬಾರ್ಮರ್:  ರಾಜಸ್ಥಾನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ತನ್ನ ಸೊಸೆಯ ಪರವಾಗಿ 80 ವರ್ಷದ ಅತ್ತೆ, ಕೋಲು ಹಿಡಿದು ಬೀದಿಗೆ ಇಳಿದು ಪ್ರಚಾರದಲ್ಲಿ ತೊಡಗಿದ ಅಪರೂಪದ ಘಟನೆಯೊಂದು ವರದಿಯಾಗಿದೆ.

ಸಿಗರತಿ ದೇವಿ ಅವರು ತಮ್ಮ ಸೊಸೆ ಮೂಲಿ ಚೌಧರಿ ಅವರ ಪರವಾಗಿ ಮನೆ ಮನೆಗಳಿಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ತನ್ನ ಸೊಸೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸಿಗರತಿ ದೇವಿ ಅವರು ಕೋಲು ಹಿಡಿದು ಬೀದಿಗೆ ಇಳಿದಿದ್ದಾರೆ.

ಬಾರ್ಮರ್ ಗ್ರಾಮೀಣ ಪಂಚಾಯತ್‌ ನಿಂದ ಸೊಸೆ ಮೂಲಿ ಚೌಧರಿ ಅವರು ಸ್ಪರ್ಧಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣೆ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ನನಗೆ ಬೆನ್ನೆಲುಬಾಗಿ ನನ್ನ ಅತ್ತೆ ನಿಂತಿದ್ದಾರೆ. ಅವರು ನನಗಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಲೆಯ ಅವ್ಯವಸ್ಥೆ, ಗ್ರಾಮದಲ್ಲಿನ ನೀರಿನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಗರತಿ ದೇವಿ, ನಾನು ಎಂದಿಗೂ ಚುನಾವಣೆಯಲ್ಲಿ ಪ್ರಚಾರ ಮಾಡಿಲ್ಲ. ಸೊಸೆಗಾಗಿ ಇದೇ ಮೊದಲ ಬಾರಿಗೆ ನಾನು ಪ್ರಚಾರಕ್ಕಿಳಿದಿದ್ದೇನೆ. ನನ್ನ ಸೊಸೆಗೆ ಮತ ಹಾಕಿ ಎಂದು ವಿನಂತಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version