12:20 AM Monday 15 - September 2025

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರ್ಕಳ ಹಾಜಿ ಅಬ್ದುಲ್ಲಗೆ ಅದ್ದೂರಿಯ ಸ್ವಾಗತ

adhul
02/11/2023

ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ, ಗುರುವಾರ ಉಡುಪಿಗೆ ಆಗಮಿಸಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಸಮಾಜ ಸೇವಕ ಪರ್ಕಳ ಹಾಜಿ ಅಬ್ದುಲ್ಲ ಸಾಹೇಬ್ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ವಾಗತಿಸಲಾಯಿತು.

ಬೆಂಗಳೂರಿನಿಂದ ಆಗಮಿಸಿದ ಪರ್ಕಳ ಹಾಜಿ ಅಬ್ದುಲ್ಲ ಸಾಹೇಬ್ ಅವರನ್ನು ಉಡುಪಿ ಕರಾವಳಿ ಬೈಪಾಸ್ ಬಳಿ ಒಕ್ಕೂಟದ ಪದಾಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿ, ಬಳಿಕ ವಾಹನ ರ್ಯಾಲಿ ಮೂಲಕ ಪರ್ಕಳದಲ್ಲಿರುವ ಅವರ ಮನೆಗೆ ಕರೆದುಕೊಂಡು ಬರಲಾಯಿತು. ಮನೆಯಲ್ಲಿ ಒಕ್ಕೂಟದ ವತಿಯಿಂದ ಪರ್ಕಳ ಹಾಜಿ ಅವರನ್ನು ಅಭಿನಂದಿಸಿ ಗೌರವ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ, ಉಪಾಧ್ಯಕ್ಷರಾದ ಮುಹಮ್ಮದ್ ವೌಲಾ, ಖಲೀದ್ ಹಸನ್, ರಫೀಕ್ ಬಿ.ಎಸ್.ಎಫ್., ಸಲಾವುದ್ದೀನ್ ಅಬ್ದುಲ್ಲಾ, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಕಟಪಾಡಿ, ಕಾರ್ಯ ದರ್ಶಿ ಇಸ್ಮಾಯಿಲ್ ಹುಸೇನ್, ಒಕ್ಕೂಟದ ಉಡುಪಿ ತಾಲೂಕು ಘಟಕ ಅಧ್ಯಕ್ಷ ಇರ್ಷಾದ್ ನೇಜಾರು, ಜಯಂಟ್ಸ್ ಇಂಟರ್ನ್ಯಾಶನಲ್ ಉಡುಪಿ ಅಧ್ಯಕ್ಷ ಇಕ್ಬಾಲ್ ಮನ್ನಾ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಶಭೀ ಅಹ್ಮದ್ ಖಾಝಿ, ಸಮೀರ್, ಕಾಸಿಂ ಬಾರಕೂರು, ಪೀರು ಸಾಹೇಬ್ ಆದಿಉಡುಪಿ, ಖತೀಬ್ ರಶೀದ್, ವಿ.ಎಸ್.ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರ್ಕಳ ಹಾಜಿ ಅಬ್ದುಲ್ಲಗೆ ಸ್ವಾಗತ, ಅಭಿನಂದನೆ

ಉಡುಪಿ, ನ.2: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ, ಗುರುವಾರ ಉಡುಪಿಗೆ ಆಗಮಿಸಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಸಮಾಜ ಸೇವಕ ಪರ್ಕಳ ಹಾಜಿ ಅಬ್ದುಲ್ಲ ಸಾಹೇಬ್ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ವಾಗತಿಸಲಾಯಿತು.

ಬೆಂಗಳೂರಿನಿಂದ ಆಗಮಿಸಿದ ಪರ್ಕಳ ಹಾಜಿ ಅಬ್ದುಲ್ಲ ಸಾಹೇಬ್ ಅವರನ್ನು ಉಡುಪಿ ಕರಾವಳಿ ಬೈಪಾಸ್ ಬಳಿ ಒಕ್ಕೂಟದ ಪದಾಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿ, ಬಳಿಕ ವಾಹನ ರ್ಯಾಲಿ ಮೂಲಕ ಪರ್ಕಳದಲ್ಲಿರುವ ಅವರ ಮನೆಗೆ ಕರೆದುಕೊಂಡು ಬರಲಾಯಿತು. ಮನೆಯಲ್ಲಿ ಒಕ್ಕೂಟದ ವತಿಯಿಂದ ಪರ್ಕಳ ಹಾಜಿ ಅವರನ್ನು ಅಭಿನಂದಿಸಿ ಗೌರವ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ, ಉಪಾಧ್ಯಕ್ಷರಾದ ಮುಹಮ್ಮದ್ ವೌಲಾ, ಖಲೀದ್ ಹಸನ್, ರಫೀಕ್ ಬಿ.ಎಸ್.ಎಫ್., ಸಲಾವುದ್ದೀನ್ ಅಬ್ದುಲ್ಲಾ, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಕಟಪಾಡಿ, ಕಾರ್ಯ ದರ್ಶಿ ಇಸ್ಮಾಯಿಲ್ ಹುಸೇನ್, ಒಕ್ಕೂಟದ ಉಡುಪಿ ತಾಲೂಕು ಘಟಕ ಅಧ್ಯಕ್ಷ ಇರ್ಷಾದ್ ನೇಜಾರು, ಜಯಂಟ್ಸ್ ಇಂಟರ್ನ್ಯಾಶನಲ್ ಉಡುಪಿ ಅಧ್ಯಕ್ಷ ಇಕ್ಬಾಲ್ ಮನ್ನಾ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಶಭೀ ಅಹ್ಮದ್ ಖಾಝಿ, ಸಮೀರ್, ಕಾಸಿಂ ಬಾರಕೂರು, ಪೀರು ಸಾಹೇಬ್ ಆದಿಉಡುಪಿ, ಖತೀಬ್ ರಶೀದ್, ವಿ.ಎಸ್.ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version