2:57 PM Saturday 31 - January 2026

ರೈಲು ಹಳಿಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

28/01/2021

ಬೆಳಗಾವಿ: ಒಂದೇ ಕುಟುಂಬದ ನಾಲ್ವರು ರೈಲು ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ.

ತಾಲೂಕಿನ ಭಿರಡಿ ಗ್ರಾಮದ ಸಾತಪ್ಪ ಅಣ್ಣಪ್ಪ ಸುತಾರ(60), ಪತ್ನಿ ಮಹಾದೇವಿ ಸಾತಪ್ಪ ಸುತಾರ(50), ಮಕ್ಕಳಾದ ಸಂತೋಷ ಸಾತಪ್ಪ ಸುತಾರ(26) ದತ್ತಾತ್ರೇಯ ಸಾತಪ್ಪ ಸುತಾರ(28) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಸಾಲಬಾಧೆಯಿಂದ ಈ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.  ರೈಲು ಹಳಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿತ್ತು.

ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿ

Exit mobile version