10:24 AM Thursday 16 - October 2025

ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಎಂದು ಅನ್ನಿಸುತ್ತಿದೆ | ಸಂತ್ರಸ್ತ ಯುವತಿಯಿಂದ  4ನೇ ವಿಡಿಯೋ ಬಿಡುಗಡೆ

cd
27/03/2021

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿದ್ದು,  ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಎಂದು ಅನ್ನಿಸುತ್ತಿದೆ ಎಂದು ಯುವತಿ ಹೇಳಿದ್ದಾಳೆ.

ನಾಲ್ಕನೇ ವಿಡಿಯೋದಲ್ಲಿ ಯುವತಿ, ತನಗೆ ಹಾಗೂ ತನ್ನ ಕುಟುಂಬಸ್ಥರಿಗೆ ಭದ್ರತೆ ಇಲ್ಲ ಎಂದು ಹೇಳಿದ್ದಾಳೆ. ರಮೇಶ್ ಜಾರಕಿಹೊಳಿಯ ಹೇಳಿಕೆಗಳನ್ನು ಪ್ರಸ್ತಾಪಿಸಿದ ಯುವತಿ, ಒಂದೇ ದಿನದಲ್ಲಿ ಸರ್ಕಾರ ಬೀಳಿಸಬಹುದು ಎಂದು ಹೇಳುತ್ತಾರೆ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳ್ತಾರೆ. ಅಂದರೆ ಅವರು ನನ್ನ ತಂದೆ ತಾಯಿಯ ತಲೆ ಬೇಕಾದರು ತೆಗೆಯ ಬಹುದು ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾಳೆ.

ಡಿಕೆಶಿ ಭೇಟಿಗೆ ಯತ್ನ:

ಮಾಧ್ಯಮದಲ್ಲಿ ನನಗೆ ಪರಿಚಯವಾಗಿದ್ದ ನರೇಶ್​ ಎಂಬುವರಿಗೆ ಕರೆ ಮಾಡಿ, ನನ್ನ ಸಮಸ್ಯೆ ಹೇಳಿಕೊಂಡೆ. ನೀವು ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ ಬಳಿಕ ಏನೆಲ್ಲಾ ಆಗಿದೆ ನೋಡಿ ಕೇಳಿಕೊಂಡೆ. ಈ ವೇಳೆ ಅವರು, ಈ ವಿಚಾರದಲ್ಲಿ ನಾನು ಚಿಕ್ಕವನು. ಇದಕ್ಕೆಲ್ಲ ರಾಜಕೀಯ ಬೆಂಬಲ ಬೇಕಾಗುತ್ತದೆ. ನಾವು ಹೋಗಿ ದೊಡ್ಡ ದೊಡ್ಡ ನಾಯಕರ ಬಳಿ ಮಾತನಾಡೋಣ, ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್​ ಬಳಿ ಮಾತನಾಡೋಣ, ನಿನಗೆ ನ್ಯಾಯ ಸಿಗುತ್ತದೆ ಯೋಚನೆ ಮಾಡಬೇಡ ಎಂದು ಧೈರ್ಯ ಹೇಳಿದರು. ಬಳಿಕ ನಾನಿರುವ ಸ್ಥಳಕ್ಕೆ ಬಂದು ಡಿಕೆಶಿ ಮನೆ ಕರೆದೊಯ್ದರು. ಡಿಕೆಶಿ ಮನೆಗೆ ಹೋದಾಗ ಅಂದು ಡಿಕೆಶಿ ಅವರು ಸಿಗಲಿಲ್ಲ ಎಂದು ಹೇಳಿದ್ದಾಳೆ.

ತನ್ನ ಸ್ವಂತ ಮಗಳನ್ನು 30 ಜನರಿಂದ ರೇಪ್ ಮಾಡಿಸಿದ ತಾಯಿ!

ಇತ್ತೀಚಿನ ಸುದ್ದಿ

Exit mobile version