11:15 PM Wednesday 15 - October 2025

ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋದ ಬಂಡುಕೋರ | ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚ್

ramesh jarakiholi
28/11/2021

ಬೆಳಗಾವಿ: ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋಗಿದ್ದ ಬಂಡುಕೋರ ಈಗ ಬಿಜೆಪಿಯಲ್ಲೂ ಬಂಡುಕೋರತನ ಮಾಡುತ್ತಿದ್ದಾರೆ ಎಂದು  ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿ ಹಂದಿಗುಂದ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರು ಬಂಡುಕೋರಿ ಮಾಡುತ್ತಿದ್ದರು. ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಕೂಡ ಬಂಡುಕೋರತನ ಮಾಡುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ನೋಡಿಕೊಳ್ಳುತ್ತಾರೆ. ನಾನು ಉತ್ತರಿಸುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳು ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಛೀ… ಛೀ ಎನ್ನುತ್ತಾ ಉತ್ತರಿಸದೇ ತೆರಳಿದ್ದರು. ಇದೀಗ ರಮೇಶ್ ಜಾರಕಿಹೊಳಿ ಅವರನ್ನು ಬಂಡೂಕೋರ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೆಸರು ಪ್ರಸ್ತಾಪಿಸದೆಯೇ ತಿರುಗೇಟು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಾವು ಹಿಡಿಯಲು ಹೋಗಿದ್ದ ವ್ಯಕ್ತಿಯನ್ನು 5ಕ್ಕೂ ಅಧಿಕ ಬಾರಿ ಕಚ್ಚಿ ಕೊಂದ ಹಾವು!

ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, ‘ಝೀ ಕನ್ನಡ’ಕ್ಕೆ ಆಗಲಿದೆ ಭಾರೀ ನಷ್ಟ!

ABCD ಗೊತ್ತಿಲ್ಲದ ಇಬ್ಬರು ಇಂಗ್ಲಿಷ್ ಶಿಕ್ಷಕರ ಅಮಾನತು

ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ

ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು

ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್, ಇನ್ನೊಂದು ಸ್ಲೇಟ್ ನಲ್ಲಿ ‘ಬಡವ ರಾಸ್ಕಲ್’ ಡೇಟ್!

ಇತ್ತೀಚಿನ ಸುದ್ದಿ

Exit mobile version