4:30 AM Saturday 18 - October 2025

ಬಾಲಿವುಡ್ ಗೆ ಕಾಲಿಡಲು ನಟಿ ರಶ್ಮಿಕಾ ಮಂದಣ್ಣ ಭರ್ಜರಿ ತಯಾರಿ

28/01/2021

ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಎಂಟ್ರಿ ನೀಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.ಸಿದ್ಧಾರ್ಥ ಮಲ್ಹೋತ್ರಾ ಅವರ ಜತೆ ಬಾಲಿವುಡ್ ಸ್ಪೈ ಥ್ರಿಲ್ಲರ್ ಚಿತ್ರ ಮಿಶನ್ ಮಂಜುದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದ್ದು, ಈ ಚಿತ್ರಕ್ಕಾಗಿ ಅವರು ವರ್ಕೌಟ್ ಆರಂಭಿಸಿದ್ದಾರೆ.

ವರ್ಕೌಟ್ ಮಾಡಲು ರಶ್ಮಿಕಾ ಜಿಮ್ ಗೆ ಹೋಗುತ್ತಿರುವ ಫೋಟೋವನ್ನು ಹೈದರಾಬಾದ್ ಟೈಮ್ಸ್ ಟ್ವೀಟ್ ಮಾಡಿದೆ. ರಶ್ಮಿಕಾ ಅವರು ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ.

ಸದ್ಯ ಸುಕುಮಾರ್ ನಿರ್ದೇಶನದ ತೆಲುಗು ಸಿನೆಮಾ ʼಪುಷ್ಪಾʼದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಮುಂದಿನ ಚಿತ್ರಕ್ಕೆ ರಶ್ಮಿಕಾ ಭರ್ಜರಿ ತಯಾರಿ ನಡೆಸಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಹಳ ಬೇಗನೆ ಜನಪ್ರಿಯರಾಗಿದ್ದ ನಟಿ ರಶ್ಮಿಕಾ ಆ ಬಳಿಕ ತೆಲು ಚಿತ್ರಕ್ಕೆ ಕಾಲಿಟ್ಟಿದ್ದರು. ಸ್ಟಾರ್ ನಟರ ಜೊತೆಗೆ ನಟಿಸುವ ಮೂಲಕ ಬಹಳ ಬೇಗನೆ ಅವರು ಜನಪ್ರಿಯರಾಗಿದ್ದಾರೆ. ಇದೀಗ ಬಾಲಿವುಡ್ ಗೆ ಅವರು ಕಾಲಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version