3:59 AM Wednesday 15 - October 2025

ರಷ್ಯಾ ಭಯೋತ್ಪಾದಕ ದೇಶ ಎಂದು ಘೋಷಿಸಿ: ಬ್ರಿಟನ್‌ ಸಂಸತ್ತಿಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ

jalaskin
09/03/2022

ಲಂಡನ್‌: ಉಕ್ರೇನ್‌ ಮೇಲೆ ಆಕ್ರಮಣ ಮಾಡಿರುವ ರಷ್ಯಾವನ್ನು ಭಯೋತ್ಪಾದಕ ದೇಶ ಎಂದು ಗುರುತಿಸಿ ಹಾಗೂ ರಷ್ಯಾ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಬ್ರಿಟೀಷ್‌ ಸಂಸದರಿಗೆ ಕರೆ ನೀಡಿದ್ದಾರೆ.

ವಿಡಿಯೋ ಸಂವಾದದ ಮೂಲಕ ಬ್ರಿಟನ್‌ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಐತಿಹಾಸಿಕ ಭಾಷಣ ಮಾಡಿದ ಉಕ್ರೇನ್‌ ನಾಯಕನಿಗೆ ಸಂಸತ್ತಿನ ಸದಸ್ಯರು ನಿಂತು ಚಪ್ಪಾಳೆ ತಟ್ಟಿದರು.
ರಷ್ಯಾ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿ ಮತ್ತು ದಯವಿಟ್ಟು ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಿ. ಉಕ್ರೇನ್‌ ಆಗಸವನ್ನು ಸುರಕ್ಷಿತ ಎಂದು ಖಚಿತಪಡಿಸಿ. ನಿಮ್ಮ ದೇಶದ ಹಿರಿಮೆಗೆ ತಕ್ಕಂತೆ ನೀವು ಏನು ಮಾಡಬೇಕು ಎನ್ನುವುದನ್ನು ಅರಿತುಕೊಂಡು ಮಾಡುತ್ತೀರಿ ಎಂದು ನಂಬುತ್ತೇನೆ ಎಂದು ಅವರು ಹೇಳಿದರು.

ತಮ್ಮ ಭವನಾತ್ಮಕ ಭಾಷಣದಲ್ಲಿ ಝೆಲೆನ್‌ಸ್ಕಿ, ಬ್ರಿಟನ್ನ ಯುದ್ಧ ಸಮಯದ ಪ್ರಧಾನಿ ವಿನಿಸ್ಟನ್‌ ಚರ್ಚಿಲ್ ಅವರ ಮಾತುಗಳನ್ನು ಮೆಲುಕು ಹಾಕಿದರು. ವಾಯು ಸಮುದ್ರ ಮತ್ತು ದೇಶದ ಬೀದಿಗಳಲ್ಲಿ ರಷ್ಯಾದ ಸೈನ್ಯದೊಂದಿಗೆ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದರು.

ನಾವು ನಮ್ಮ ದೇಶವನ್ನು ಬಿಟ್ಟುಕೊಡುವುದಿಲ್ಲ ಮತ್ತು ಸೋಲುವುದಿಲ್ಲ. ಕೊನೆಯವರೆಗೂ ನಾವು ನಮ್ಮ ಭೂಮಿಗಾಗಿ ಹೋರಾಟ ಮುಂದುವರಿಸುತ್ತೇವೆ. ಏನೇ ಬೆಲೆತೆತ್ತರೂ ಸಹ ನಾವು ಹೋರಾಟ ಮಡುತ್ತೇವೆ ಎಂದು ಹೇಳಿದರು.

ನಾವು ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಈ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಬೋರಿಸ್‌, ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಬ್ರಿಟಿಷ್‌ ಸಂಸತ್ತು ಮತ್ತು ಪ್ರಧಾನಿಯನ್ನು ಉದ್ದೇಶಿಸಿ ಝೆಲನ್‌ಸ್ಕಿ ಹೇಳಿಕೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ

ಹೈಟೆಕ್​​​ ವೇಶ್ಯಾವಾಟಿಕೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಚಾಕು ಇರಿದು ವ್ಯಕ್ತಿಯ ಕೊಲೆ ಯತ್ನ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ: ಮಗ – ತಂದೆ ಇಬ್ಬರೂ ಸಾವಿಗೆ ಶರಣು

ದುಬೈನಲ್ಲಿ ಕೇರಳದ ಖ್ಯಾತ ಆಲ್ಬಂ ಸ್ಟಾರ್ ಅನುಮಾನಸ್ಪದವಾಗಿ ಸಾವು

 

ಇತ್ತೀಚಿನ ಸುದ್ದಿ

Exit mobile version