9:09 AM Thursday 16 - October 2025

ರಷ್ಯಾ ವಿರುದ್ಧ ಪ್ರತಿದಾಳಿ: ಐದು ವಿಮಾನ, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್’

russia ukren
24/02/2022

ಮಾಸ್ಕೋ: ರಷ್ಯಾ ಯುದ್ಧ ಘೋಷಣೆಯ ನಂತರ ಉಕ್ರೇನ್‌ನ ಪ್ರದೇಶಗಳಲ್ಲಿ ರಷ್ಯಾ ಬಾಂಬ್ ದಾಳಿ ನಡೆಸಿದೆ. ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್‌ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಉಕ್ರೇನ್ ಪಡೆಗಳ ಕಮಾಂಡ್ ಪ್ರಕಾರ, ಫೆ. 24ರಂದು ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಸೇನಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹೇಳಿಕೆಯನ್ನು ಸಾರಾಸಾಗಟಾಗಿ ನಿರಾಕರಿಸಿರುವ ರಷ್ಯಾ, ಉಕ್ರೇನಿಯನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಉಕ್ರೇನ್ ​​ನ ಇವಾನೊ-ಫ್ರಾಂಕಿವ್ಸ್ಕ್ ವಿಮಾನ ನಿಲ್ದಾಣ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವ ವಿಡಿಯೋವನ್ನು ಅಮೆರಿಕ ಮೂಲದ ಬಿಎನ್​ಒ ನ್ಯೂಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ​ನಲ್ಲಿ ಮಾರ್ಷಲ್ ಕಾನೂನು ಜಾರಿಗೆ ತಂದಿದ್ದು, ನಾಗರಿಕರು ಶಾಂತವಾಗಿರಬೇಕೆಂದು ಮನವಿ ಮಾಡಿದ್ದಾರೆ. ರಷ್ಯಾ ವಿಶೇಷ ಕಾರ್ಯಾಚರಣೆಯನ್ನು ಘೋಷಿಸಿದಂತೆಯೇ ಡಾನ್ಬಾಸ್ ಪ್ರದೇಶದಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಉಕ್ರೇನ್ ಘೋಷಿಸಿದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್‌ ನ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರಷ್ಯಾದ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ಉಕ್ರೇನಿಯನ್ ರಾಜ್ಯವನ್ನು ನಾಶಪಡಿಸುವುದಾಗಿದೆ. ಬಲವಂತವಾಗಿ ಉಕ್ರೇನ್ ಪ್ರದೇಶವನ್ನು ವಶಪಡಿಸಿಕೊಳ್ಳುವ ರಷ್ಯಾ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಟ ಚೇತನ್ ಬಂಧನ ವಿಚಾರ: ಪೊಲೀಸರ ನಡೆ ಅನುಮಾನಾಸ್ಪದವಾಗಿದೆ; ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

ಸಾಮೂಹಿಕ ಅತ್ಯಾಚಾರ: ಮನನೊಂದು ಯುವತಿ ಆತ್ಮಹತ್ಯೆ

ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಹರ್ಷ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ: ಪಿ ಆರ್‌ ಓ ವಜಾಕ್ಕೆ ಆಗ್ರಹಿಸಿ ಧರಣಿ

 

ಇತ್ತೀಚಿನ ಸುದ್ದಿ

Exit mobile version