6:01 PM Thursday 16 - October 2025

ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ: ಕಿಡಿಗೇಡಿಗಳ ಬಂಧನಕ್ಕೆ ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಮನವಿ

prathap
20/12/2021

ಬೆಳಗಾವಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿಗೊಳಿಸಿರುವ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಬೆಳಗಾವಿಯಲ್ಲಿ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಕನ್ನಡ ಧ್ವಜ ಸುಟ್ಟು ಸೌಹಾರ್ದತೆಗೆ ಭಂಗ ತರುವ ಯತ್ನ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲದೆ, ಇಂಥ ದುಷ್ಕೃತ್ಯಗಳನ್ನು ಸರ್ಕಾರವು ಹತ್ತಿಕ್ಕಬೇಕು ಎಂದು ಮನವಿ ಮಾಡುತ್ತೇನೆ.

ವ್ಯಕ್ತಿಗಳು ಪ್ರತಿಮೆಗಳಾಗುವುದು ಅವರ ನಿಷ್ಠೆ-ಪ್ರಾಮಾಣಿಕತೆ ಮತ್ತು ಬದ್ಧತೆಗಳಿಂದ. ವಿಚಿತ್ರ ಎಂದರೆ ಅವು ಯಾವೂ ಇಲ್ಲದ ಜನಗಳು ಪ್ರತಿಮೆಗಳ ವಿರೂಪ ಮಾಡ್ತಿದ್ದಾರೆ. ಹೇಳೋದು ಇಷ್ಟೇ, ಎಲ್ಲರೂ ಪ್ರತಿಮೆಗಳಾಗುವ ಎತ್ತರಕ್ಕೇರೋಣ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌: ಕಿಡಂಬಿ ಶ್ರೀಕಾಂತ್‌ ಗೆ ಬೆಳ್ಳಿ ಪದಕ

ಬೈಕ್‌ ಗೆ ಲಾರಿ ಡಿಕ್ಕಿ: ಇಬ್ಬರು ಮಕ್ಕಳು ಸಹಿತ ತಾಯಿ ದಾರುಣ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಸಾವು

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಶೌಚಾಲಯದ ಗೋಡೆ ತೆರವುಗೊಳಿಸುತ್ತಿದ್ದ ವೇಳೆ ಮೈಮೇಲೆ ಬಿದ್ದ ಗೋಡೆ: ಇಬ್ಬರು ಮಹಿಳೆಯರ ದಾರುಣ ಸಾವು

ಟ್ರಾವೆಲ್ ಹಿಸ್ಟರಿಯೇ ಇಲ್ಲದ ವಿದ್ಯಾರ್ಥಿನಿಗೆ ಒಮಿಕ್ರಾನ್: ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಒಮಿಕ್ರಾನ್ ಕೇಸ್ ಎಷ್ಟು?

ಇತ್ತೀಚಿನ ಸುದ್ದಿ

Exit mobile version