12:05 PM Wednesday 15 - October 2025

ಆರ್ ಸಿಬಿ ಗೆಲುವಿಗೆ ಅಭಿಮಾನಿ ಮಾಡಿದ್ದೇನು ಗೊತ್ತಾ? | ಈ ಸುದ್ದಿ ಓದಿದರೆ ಬಿದ್ದು ಬಿದ್ದು ನಗುತ್ತೀರಿ!

28/02/2021

ಚಿತ್ರದುರ್ಗ: ಆರ್ ಸಿಬಿ ಫ್ಯಾನ್ಸ್ ಎಂದರೆ ಸಾಕು, ಆಗಲೇ ಬರುವ ಒಂದೇ ಡೈಲಾಗ್ ಈ ಸಲ ಕಪ್ ನಮ್ದು ಅಂತ. ಇದನ್ನು ಬಹುತೇಕರು ಹಾಸ್ಯವಾಗಿಯೇ ಬಳಸುವುದು ಹೆಚ್ಚು. ಆರ್ ಸಿಬಿ ಫ್ಯಾನ್ಸ್ ಅಂದ್ರೆ ಪ್ರತೀ ಬಾರಿಯೂ ಈ ಬಾರಿ ಕಪ್ ನಮ್ದು ಎಂದು ಹೇಳುತ್ತಲೇ ಕೊನೆಗೆ ಅತ್ತ ನಗಲೂ ಆಗದೇ, ಇತ್ತ ಅಳಲೂ ಆಗದ ಪರಿಸ್ಥಿತಿಯಲ್ಲಿ ಬಂದು ನಿಲ್ಲುವವರು ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲೊಬ್ಬ ಮಾಡಿದ ಕೆಲಸ ನೋಡಿದರೆ ಯಾರಿಗಾದರೂ ನಗು ಉಕ್ಕಿ ಬರಬಹುದು.

ಹೌದು…! ಆರ್ ಸಿಬಿಯ ಹುಚ್ಚು ಅಭಿಮಾನಿಯೋರ್ವ ಆರ್ ಸಿಬಿಯನ್ನು ಗೆಲ್ಲಿಸುವಂತೆ ವಿಶೇಷವಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾನೆ. ಕಳೆದ 14 ವರ್ಷಗಳಿಂದಲೂ ಸತತವಾಗಿ ಕೊನೆಯ ಹಂತದವರೆಗೆ ಬಂದು ಸೋತು ಹೋಗುತ್ತಿರುವ ಆರ್ ಸಿಬಿಯನ್ನು ಒಮ್ಮೆಯಾದರೂ ಗೆಲ್ಲಿಸುವಂತೆ ಆತ ಪ್ರಾರ್ಥನೆ ಮಾಡಿದ್ದಾನೆ.

ಚಿತ್ರದುರ್ಗದ ಹಿರಿಯೂರು ಪಟ್ಟಣದ ತೇರುಮಲ್ಲೇಶ್ವರ ರಥೋತ್ಸವದಲ್ಲಿ ಆರ್ ಸಿಬಿ ಫ್ಯಾನ್ ದೇವರಿಗೆ ವಿಶೇಷ ಬಾಳೆ ಹಣ್ಣು ಅರ್ಪಿಸಿದ್ದಾನೆ.  ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಾರಿಯಾದರೂ ಆರ್ ಸಿಬಿಯನ್ನು ಗೆಲ್ಲಿಸಪ್ಪಾ ಎಂದು ಜನರುಕೂಡ ಇದಕ್ಕೆ ರಿಪ್ಲೈ ಮಾಡಿದ್ದು, ಆರ್ ಸಿಬಿ ಫ್ಯಾನ್ಸ್ ಕಷ್ಟ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

whatsapp

ಇತ್ತೀಚಿನ ಸುದ್ದಿ

Exit mobile version