ಬಣಕಲ್ ನೂತನ ಸಬ್ ಇನ್ ಸ್ಪೆಕ್ಟರ್ ಆಗಿ ರೇಣುಕಾದೇವಿ ನೇಮಕ

11/11/2023
ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಗೆ ನೂತನ ಸಬ್ ಇನ್ ಸ್ಪೆಕ್ಟರ್ ಆಗಿ ರೇಣುಕಾದೇವಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜಂಬುರಾಜ್ ಮಹಾಜನ್ ಅವರು ಇಲ್ಲಿಂದ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ರೇಣುಕಾದೇವಿ ಅಧಿಕಾರ ಸ್ವೀಕರಿಸಿದರು.
ರೇಣುಕಾದೇವಿ ಈ ಹಿಂದೆ ಬಣಕಲ್ ಗಡಿ ಭಾಗದ ಬಾಳೂರು ಪೊಲೀಸ್ ಠಾಣೆಯಲ್ಲಿ ಕೆಲವು ಸಮಯ ಕಾರ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆ ಗೊಂಡಿದ್ದರು. ಜಂಬೂರಾಜ್ ಮಹಾಜನ್ ಅವರು ರೇಣುಕಾದೇವಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.