1:28 AM Saturday 18 - October 2025

ಪಂಗನಾಮ: ಸುಳ್ಳು ಹೇಳಿ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬೆದರಿಸಿ 60 ಲಕ್ಷ ದೋಚಿದ ಆನ್ ಲೈನ್ ವಂಚಕರು

21/10/2024

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಂದ ಆನ್ ಲೈನ್ ವಂಚಕರು ಸುಮಾರು 60 ಲಕ್ಷ ಹಣ ದೋಚಿದ ಘಟನೆ ನಡೆದಿದೆ. ವಂಚಕರು ನಿವೃತ್ತ ಅಧಿಕಾರಿ ಹತ್ರ ನೀವು ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಿ ಎಂದು ಸುಳ್ಳು ಆರೋಪಿಸಿ ಆರು ದಿನಗಳ ಕಾಲ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪಿಗಳು ದೆಹಲಿಯ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿ, ಅನೇಕ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ಭಾರತೀಯ ಆಹಾರ ನಿಗಮದ ನಿವೃತ್ತ ಅಧಿಕಾರಿ ಮತ್ತು ಗಾಜಿಯಾಬಾದ್ ನಿವಾಸಿ ಪ್ರೀತಮ್ ಸಿಂಗ್ ಚೌಹಾಣ್ ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಎಫ್ಐಆರ್ ನಲ್ಲಿ, ಸೈಬರ್ ಕ್ರೈಮ್ ಅಧಿಕಾರಿಗಳ ಸೋಗಿನಲ್ಲಿ ಅಕ್ಟೋಬರ್ 10 ರಂದು ವೀಡಿಯೊ ಕರೆ ಮೂಲಕ ಆರೋಪಿ ತನ್ನನ್ನು ಹೇಗೆ ಸಂಪರ್ಕಿಸಿದನೆಂದು ಚೌಹಾಣ್ ವಿವರಿಸಿದ್ದಾರೆ. ಅವರ ಹೆಸರಿನಲ್ಲಿ ತೆರೆಯಲಾದ ಖಾತೆಯ ಮೂಲಕ 68 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಮಕ್ಕಳ ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿ ನಿಮ್ಮ‌ ಮೇಲೆ ಕೇಸ್ ದಾಖಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಸಿಬಿಐ ಈಗಾಗಲೇ ತನ್ನ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ ಮತ್ತು ಆತನ ಬಂಧನ ಸನ್ನಿಹಿತವಾಗಿದೆ ಎಂದು ಆರೋಪಿಯು ಬೆದರಿಸಿದ್ದ. ಬಂಧನವನ್ನು ತಪ್ಪಿಸಲು ನೀವು ನಮಗೆ ಕೇಳಿದಷ್ಟು ಹಣ ಕೊಡಬೇಕು. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಆರು ದಿನಗಳ ಕಾಲ ಬೆದರಿಸಿ 60 ಲಕ್ಷ ರೂಪಾಯಿಗಳನ್ನು ವಿವಿಧ ಖಾತೆಗಳಿಗೆ “ಭದ್ರತಾ ಠೇವಣಿ” ಯಾಗಿ ವರ್ಗಾಯಿಸುವಂತೆ ಅವರು ಆತನ ಮೇಲೆ ಒತ್ತಡ ಹೇರಿದ್ದರು ಎಂದಿದ್ದಾರೆ.

ಹಣವನ್ನು ತೆಗೆದುಕೊಂಡ ನಂತರವೂ, ವಂಚಕರು ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿಗಳನ್ನು‌ ಕೇಳಿದ್ದಾರೆ ಮತ್ತು ಆತನನ್ನು ಮತ್ತಷ್ಟು ಬೆದರಿಸಲು ನಕಲಿ ನ್ಯಾಯಾಲಯದ ನೋಟಿಸ್ ಕಳುಹಿಸಿದ್ದಾರೆ. ಹೆಚ್ಚಿನ ಹಣವನ್ನು ಸಂಗ್ರಹಿಸಲು ಚೌಹಾಣ್‌ರಿಗೆ ಸಾಧ್ಯವಾಗದಿದ್ದಾಗ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡು ಘಜಿಯಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಉಸ್ತುವಾರಿ ಸಂತೋಷ್ ತಿವಾರಿ, ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದು ಈ ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version