ಹಣ ಗುಳುಂ ಮಾಡಿದ ಸರ್ಕಾರಿ ಅಧಿಕಾರಿ ಮನೆ ಮೇಲೆ ದಾಳಿ: ರೈಡ್ ಆಗ್ತಿದ್ದಂತೆ ಪಕ್ಕದ ಮನೆಯ ಟೆರೇಸ್ ಗೆ ಹಣದ ಗಂಟು ಎಸೆದ ಭ್ರಷ್ಟನ ಪತ್ನಿ..!

24/06/2023

ಒಡಿಶಾ ಪೊಲೀಸರ ವಿಚಕ್ಷಣಾ ವಿಭಾಗವು ರಾಜ್ಯದ ವಿವಿಧ ಸ್ಥಳಗಳಲ್ಲಿನ ಸರ್ಕಾರಿ ಅಧಿಕಾರಿಯ ನಿವಾಸಗಳ ಮೇಲೆ ದಾಳಿ ನಡೆಸಿ 3 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ.

ಭುವನೇಶ್ವರ, ನಬರಂಗ್ಪುರ ಮತ್ತು ಇತರ ಸ್ಥಳಗಳಲ್ಲಿರುವ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ನಡೆಸಿದ ದಾಳಿಯಲ್ಲಿ ನಬರಂಗ್ಪುರ ಜಿಲ್ಲೆಯ ಹೆಚ್ಚುವರಿ ಸಬ್ ಕಲೆಕ್ಟರ್ ಆಗಿ ನೇಮಕಗೊಂಡ ಒಡಿಶಾ ಆಡಳಿತ ಅಧಿಕಾರಿ (ಒಎಎಸ್) ಪ್ರಶಾಂತ್ ಕುಮಾರ್ ರೌತ್ ಅವರ ಬಳಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ದಾಳಿ ವೇಳೆ ಆರೋಪಿ ಅಧಿಕಾರಿಯ ಪತ್ನಿಯು ಕಾನನ್ ವಿಹಾರ್ ನಲ್ಲಿರುವ ತಮ್ಮ ನೆರೆಹೊರೆಯವರ ಟೆರೇಸ್ ಗೆ ಆರು ನಗದು ತುಂಬಿದ ಕಾರ್ಟನ್ ಗಳನ್ನು ಎಸೆದು ಚಾಲಾಕಿತನ ತೋರಿಸಿದ್ದಾಳೆ.ಈ ಮಾಹಿತಿ ತಿಳಿದ ತಂಡವು ಹಣ ಇದ್ದ ಪೆಟ್ಟಿಗೆಗಳನ್ನು ನೆರೆಹೊರೆಯವರ ಮನೆಯಿಂದ ವಶಪಡಿಸಿಕೊಂಡಿತು.

ಈ ಹಣವನ್ನು ಎಣಿಸಲು ಅನೇಕ ಎಣಿಕೆ ಯಂತ್ರಗಳನ್ನು ಬಳಸಲಾಯಿತು. ರೌತ್ ಅವರ ನಬರಂಗ್ಪುರ ನಿವಾಸದಿಂದ 89.5 ಲಕ್ಷ ನಗದು ಮತ್ತು ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ರಾಜ್ಯದ ಸರ್ಕಾರಿ ಅಧಿಕಾರಿಯಿಂದ ವಶಪಡಿಸಿಕೊಂಡ ಎರಡನೇ ಅತಿದೊಡ್ಡ ನಗದು. 2022 ರ ಏಪ್ರಿಲ್ ನಲ್ಲಿ ಗಂಜಾಂ ಜಿಲ್ಲೆಯ ಸಣ್ಣ ನೀರಾವರಿ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡ ಕಾರ್ತಿಕೇಶ್ವರ್ ರೌಲ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿ 3.41 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version