ಸಮುದ್ರದಲ್ಲಿ ಮುಳುಗಿ ಯುವಕ ಸಾವು

death 2
07/03/2022

ಬೈಂದೂರು: ಗಾಳ ಹಾಕಿ ಮೀನು ಹಿಡಿಯಲು ಸ್ನೇಹಿತರ ಜೊತೆ ಸಮುದ್ರಕ್ಕೆ ತೆರಳಿದ ಯುವಕನೋರ್ವ ನೀರುಪಾಲಾದ ಘಟನೆ ತಾಲೂಕಿನ ಸೋಮೇಶ್ವರ ಬಳಿ ಭಾನುವಾರ ಸಂಜೆ ನಡೆದಿದೆ.

ಬೈಂದೂರು ಬಿಜೂರು ಸಮೀಪದ ಬವಳಾಡಿ ನಿವಾಸಿ ಮಂಜುನಾಥ ದೇವಾಡಿಗ ಎಂಬವರ ಪುತ್ರ ಶಶಿಧರ್ ದೇವಾಡಿಗ (22) ಮೃತ ಯುವಕ. ಈತ ತನ್ನ ನಾಲ್ವರು ಸ್ನೇಹಿತರೊಂದಿಗೆ ಗಾಳ ಹಾಕಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ಕೊಚ್ಚಿಹೋಗಿದ್ದಾರೆ.

ತನ್ನ ಸ್ನೇಹಿತ ಹಾಗೂ ಮೀನುಗಾರರು ರಕ್ಷಣೆಗೆ ಮುಂದಾದರೂ ಕೂಡ ಶಶಿಧರ್ ಅವರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಹಾಗೂ ಠಾಣೆಯವರು ಭೇಟಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಸ್ತಿಗಾಗಿ ತಂದೆಯನ್ನು ಭೀಕರವಾಗಿ ಹತ್ಯೆಗೈದ ಪುತ್ರ: ಬೆಚ್ಚಿ ಬಿದ್ದ ಗ್ರಾಮಸ್ಥರು

ಪ್ರಿಯಕರನ ಜೊತೆ ಕರ್ನಾಟಕಕ್ಕೆ ಬಂದು ಮದುವೆಯಾದ ತಮಿಳುನಾಡು ಸಚಿವರ ಪುತ್ರಿ

ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಆಗಬಾರದು: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರೀತಿಸಿ ಮದುವೆಯಾದ ಯುವತಿಯನ್ನು ಎಳೆದೊಯ್ದ ಪೊಲೀಸರು

ಯುದ್ಧ ಪೀಡಿತ ಉಕ್ರೇನ್‌ ನಿಂದ 1,000ಕಿ.ಮೀ. ದೂರ ಒಬ್ಬನೇ ಪ್ರಯಾಣಿಸಿದ ಬಾಲಕ

 

ಇತ್ತೀಚಿನ ಸುದ್ದಿ

Exit mobile version