3:54 PM Friday 11 - September 2026

ಸರ್ಕಾರದ ಗೈಡ್ ಲೈನ್ಸ್ ಎಂದು ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು | ಕೊರೊನಾದ ನಡುವೆ ಮಾಧ್ಯಮಗಳ ಕಣ್ಣಮುಚ್ಚಾಲೆಯಾಟ

fake news
19/04/2021

ಬೆಂಗಳೂರು: ನಾಳೆಯಿಂದ ರಾತ್ರಿ 9 ಗಂಟೆಯಿಂದ ರಾಜ್ಯದಲ್ಲಿ ಎಲ್ಲ ಬಂದ್ ಆಗುತ್ತದೆ ಎಂಬ ಬಗ್ಗೆ ಮಾಧ್ಯಮ ವರದಿಗಳು ಬರುತ್ತಿದ್ದು, ಆದರೆ, ವಾಸ್ತವವಾಗಿ ರಾಜ್ಯ ಸರ್ಕಾರ ಇಂತಹದ್ದೊಂದು ಆದೇಶವನ್ನೇ ಹೊರಡಿಸಿಲ್ಲ ಎಂದು ಹೇಳಲಾಗಿದೆ.

ಸರ್ಕಾರವು ಯಾವುದೇ ಗೈಡ್ ಲೈನ್ಸ್ ಬಿಡುಗಡೆ ಮಾಡಿಲ್ಲ. ಆದರೆ ಕೆಲವು ಮಾಧ್ಯಮಗಳು ಈ ಬಗ್ಗೆ ಗೊಂದಲ ಸೃಷ್ಟಿಸಿದ್ದರಿಂದಾಗಿ ನಾಳೆಯಿಂದ ರಾತ್ರಿ 9 ಗಂಟೆಯಿಂದ ರಾಜ್ಯದಲ್ಲಿ ಎಲ್ಲವೂ ಬಂದ್ ಆಗಲಿದೆ ಎಂದು ಹೇಳಿದ್ದರು. ಮಸೀದಿ, ಮಂದಿರಗಳು ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿತ್ತು.

ಆದರೆ ವಾಸ್ತವವಾಗಿ ಮಾಧ್ಯಮಗಳು, ಸರ್ಕಾರ ಈ ರೀತಿಯದ್ದೆಲ್ಲ, ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ಹೇಳಿವೆ. ಆದರೆ ಸಾರ್ವಜನಿಕವಾಗಿ ಈ ವರದಿಗಳು ಗೊಂದಲಗಳನ್ನು ಸೃಷ್ಟಿ ಮಾಡಿದೆ.

ಮಾಧ್ಯಮಗಳು ಸರ್ಕಾರದ ಗೈಡ್ ಲೈನ್ಸ್ ಎಂದು ಜನರನ್ನು ದಾರಿ ತಪ್ಪಿಸಿವೆ. ಕೊನೆಯ ಕ್ಷಣದಲ್ಲಿ ಇಂತಹದ್ದೊಂದು ಗೈಡ್ ಲೈನ್ಸ್ ಬಂದಿಲ್ಲ ಎಂದು ವರದಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version