12:02 PM Wednesday 15 - October 2025

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಾಲೆಗಳು: ಅನುಮತಿ ಇಲ್ಲದೆಯೇ ಶಾಲೆ ಆರಂಭಕ್ಕೆ ಮುಂದಾಯ್ತೇ ರುಪ್ಸಾ?

school opening
01/08/2021

ಬೆಂಗಳೂರು: ಕೊವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಶಾಲೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಿರುಗಿ ಬಿದ್ದಿದ್ದು,  ಸರ್ಕಾರ ಶಾಲೆ ತೆರೆಯುವಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ, ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶಾಲೆಗಳನ್ನು ತೆರೆಯುವ ಬಗ್ಗೆ ರುಪ್ಸಾ ಸಂಘಟನೆ ಜುಲೈ 31ರವರೆಗೆ ಡೆಡ್ ಲೈನ್ ನೀಡಿತ್ತು. ಆದರೆ, ಇನ್ನೂ ಕೂಡ ಶಾಲೆಗಳನ್ನು ತೆರೆದಿಲ್ಲ. ಹೀಗಾಗಿ ನಾಳೆಯಿಂದ(ಆಗಸ್ಟ್ 2) ಶಾಲೆಗಳನ್ನು ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಸದ್ಯ ಸಚಿವ ಸಂಪುಟ ಕೂಡ ರಚನೆಯಾಗಿಲ್ಲ. ಹೀಗಾಗಿ ಶಾಲಾ ಆರಂಭದ ವಿಚಾರ ಇನ್ನಷ್ಟು ವಿಳಂಬವಾಗುತ್ತದೆ ಎನ್ನುವ ಅಭಿಪ್ರಾಯಗಳ ನಡುವೆಯೇ ರುಪ್ಸಾ ಸರ್ಕಾರದ ಆದೇಶವಿಲ್ಲದಿದ್ದರೂ, ಶಾಲಾ ಆರಂಭಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.

ಇನ್ನೂ ಶಾಲಾ ಆರಂಭದ ಬಗ್ಗೆ ಇಂದು ರುಪ್ರಾ ಸಂಘಟನೆ ಸುದ್ದಿಗೋಷ್ಠಿ ನಡೆಸಲಿದೆ ಎಂದು ಹೇಳಲಾಗಿದೆ. ರುಪ್ರಾ  ಅಧ್ಯಕ್ಷ ಲೇಪಾಕ್ಷಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಿಳಿದು ಬಂದಿದ್ದು, ಆಗಸ್ಟ್ 1ರಂದು ಮಧ್ಯಾಹ್ನ 12 ಗಂಟೆಯ ವೇಳೆ ಸುದ್ದಿಗೋಷ್ಠಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಭಗತ್ ಸಿಂಗ್ ನಾಟಕದ ದೃಶ್ಯ ಅಭ್ಯಾಸ ಮಾಡುತ್ತಿದ್ದ ಬಾಲಕ ನೇಣಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ

ರಸ್ತೆಯಲ್ಲಿ ಅಡ್ಡನಿಂತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಧರ್ಮದೇಟು!

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಭೀಕರವಾಗಿ ಕೊಂದ ಕಾಡು ಪ್ರಾಣಿ!

ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ | ಸತೀಶ್ ಜಾರಕಿಹೊಳಿ

ಬಿಜೆಪಿಗೆ ಬಂದ 17 ಶಾಸಕರಿಗೆ ಬಿಗ್ ಶಾಕ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ!

ಇತ್ತೀಚಿನ ಸುದ್ದಿ

Exit mobile version