3:13 PM Saturday 18 - October 2025

ಸಾವರ್ಕರ್ ಬ್ರಿಟೀಷರ ಬೂಟನ್ನು ನೆಕ್ಕಿದ್ದರು: ಬಿ.ಕೆ.ಹರಿಪ್ರಸಾದ್

b k hariprasad
25/08/2022

ಮೈಸೂರು:  ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಕಾಂಗ್ರೆಸ್ ನವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಆದರೆ ಬಿಜೆಪಿಯವರು ಇತಿಹಾಸವನ್ನು ತಿರುಚಿದ್ದಾರೆ  ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ. ಅವರು ಬ್ರಿಟಿಷರ ಬೂಟನ್ನು ನೆಕ್ಕಿದ್ದರು. ಆರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ ಎಂದರು.

ಬ್ರಿಟಿಷರ ವಿರುದ್ಧಸಾವರ್ಕರ್  ಹೋರಾಡಿದ ಒಂದೇ ಒಂದು ಉದಾಹರಣೆ ಇದ್ದರೆ ಕೊಡಲಿ ಸಾಕು  ಎಂದು ಅವರು ಬಿಜೆಪಿಗೆ ಸವಾಲು  ಹಾಕಿದರು.

ಮಹಾತ್ಮ ಗಾಂಧೀಜಿ ಕೊಂದಂತಹ ಗೋಡ್ಸೆ ಬಿಟ್ಟರೇ ಬೇರಾವ ಮಹಾಪುರುಷ ಇವರಿಗೆ ಸಿಕ್ಕಿರಲಿಲ್ಲ. ಇದೀಗ ಸಾವರ್ಕರ್ ಹೆಸರೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಾವರ್ಕರ್ ತಾನೊಬ್ಬ ಅಪ್ಪಟ ನಾಸ್ತಿಕ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ನಾಸ್ತಿಕ ಸಾವರ್ಕರ್ ಭಾವ ಚಿತ್ರವನ್ನು ಗಣೇಶೋತ್ಸವದಲ್ಲಿ ಇಡುವ ಮೂಲಕ ಬಿಜೆಪಿಗರು ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version