ಚಾಮರಾಜನಗರದಲ್ಲಿ ಹಣ್ಣು ಮಾರಾಟ ಮಾಡಿ ವಾಟಾಳ್ ಮತ ಬೇಟೆ!

ಚಾಮರಾಜನಗರ: ವಿಭಿನ್ನ ಚಳವಳಿ ಮೂಲಕ ಗಮನ ಸೆಳೆಯುವ ವಾಟಾಳ್ ನಾಗರಾಜ್ ಮತಯಾಚನೆಯನ್ನೂ ಡಿಫರೆಂಟ್ ಆಗಿ ಮಾಡುತ್ತಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಶಾಸಕ ವಾಟಾಳ್ ನಾಗರಾಜ್, ಚಾಮರಾಜನಗರದ ಮಾರಿಗುಡಿ ಬೀದಿಯಲ್ಲಿನ ಹಣ್ಣು ಮಾರಾಟಗಳ ಗಾಡಿಗಳಲ್ಲಿ ಕುಳಿತು ಮಾವು, ಸೇಬು, ಬಾಳೆ ಮಾರಾಟ ಮಾಡಿ ಮತಬೇಟೆ ನಡೆಸಿದರು.
ಅರ್ಧ ಕೆಜಿ ಸೇಬಿಗೆ 100 ರೂ. ವಾಟಾಳ್ ನಾಗರಾಜ್ ಗೆ ಒಂದು ಓಟ್, ಅರ್ಧ ಕೆಜಿ ಮಾವಿನ ಹಣ್ಣಿಗೆ 60 ನಿಮ್ಮ ವಾಟಾಳ್ ಗೆ ಒಂದು ಮತ ಎಂದು ಹಣ್ಣುಗಳನ್ನು ಮಾರಾಟ ಮಾಡುವ ಜೊತೆಜೊತೆಗೆ ತನಗೊಂದು ಮತ ಕೊಡುವಂತೆ ಮನವಿ ಮಾಡಿದರು. ಗಲ್ಲಾದ ಮೇಲೆ ವಾಟಾಳ್ ಕುಳಿತಿದ್ದರಿಂದ ಜನರು ಭರ್ಜರಿಯಾಗಿಯೇ ವ್ಯಾಪಾರವನ್ನು ಮಾಡಿದರು. ಮತ ಹಾಕುವ ಭರವಸೆಯನ್ನು ಕೊಟ್ಟರು.
ಜಿಲ್ಲೆ ಮಾಡಿದ್ದು ನಾನು, ರಾಹುಲ್ ಗಾಂಧಿ ಅಲ್ಲ
ಚಾಮರಾಜನಗರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವ ಕುರಿತು ವಾಟಾಳ್ ನಾಗರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಮಾಡಿದ್ದು ನಾನು- ರಾಹುಲ್ ಗಾಂಧಿ ಅಲ್ಲ, ರಸ್ತೆ ಮಾಡಿದ್ದು ನಾನು, ಕುಡಿಯುವ ನೀರು ಕೊಟ್ಟಿದ್ದು ನಾನು, ಬಿಜೆಪಿ-ಕಾಂಗ್ರೆಸ್ ನವರಲ್ಲ, ನೀರು ಕುಡಿಯುವ ಋಣಕ್ಕಾದರೂ ಜನರು ನನಗೊಂದು ಮತ ಕೊಡಬೇಕು, ನನ್ನನ್ನು ಸೋಲಿಸಿದರೇ ನನ್ನ ಹಾಗೂ ಚಾಮರಾಜನಗರ ಬಾಂಧವ್ಯ ಕೊನೆಯಾಗಲಿದೆ ಎಂದರು.
ಮತ ಎಂಬುದು ಖರೀದಿ ಮಾಡಲು ಹಣ್ಣು, ತರಕಾರಿ ಅಲ್ಲ, ಜನರು ತಮ್ಮ ಮತವನ್ನು ಹಣಕ್ಕೆ, ಜಾತಿಗೆ ಮಾರಿಕೊಳ್ಳಬಾರದು, ಚಾಮರಾಜನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಸೋಲಬೇಕು, ವಾಟಾಳ್ ನಾಗರಾಜ್ ಗೆಲ್ಲಬೇಕು, ಕಳೆದ 15 ವರ್ಷಗಳಿಂದ ಆಯ್ಕೆಯಾಗುತ್ತಿರುವ ಕೈ ಶಾಸಕ ಶಾಸನಸಭೆಯಲ್ಲಿ ಏನು ಮಾತನಾಡಿದ್ದಾರೆಂದು ಕಿಡಿಕಾರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw