12:46 AM Wednesday 5 - November 2025

ಕಾರಿನಲ್ಲೇ  ಲೈಂಗಿಕ ಕ್ರಿಯೆ: ಪ್ರಶ್ನಿಸಲು ಹೋದ ಸಬ್ ಇನ್ಸ್’ಪೆಕ್ಟರ್ ಮೇಲೆ ಕಾರು ಹತ್ತಿಸಿದ ಜೋಡಿ!

sex in car news
25/01/2024

ಬೆಂಗಳೂರು: ಜೋಡಿಯೊಂದು  ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದು, ಇದೇ ವೇಳೆ ಜೋಡಿಗೆ ತಿಳುವಳಿಕೆ ಹೇಳಲು ಮುಂದಾದ ಪೊಲೀಸರ ಮೇಲೆಯೇ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಉದ್ಯಾನವನವೊಂದರ ಬಳಿ ನಡೆದಿದೆ.

ಘಟನೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಮಹೇಶ್ ಎಂಬವರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಿಯೋ ಸೆಲಾಟೋಸ್ ಕಾರಿನಲ್ಲಿ ಬಂದಿದ್ದ ಜೋಡಿ ಕಾರಿನಲ್ಲೇ ಅಶ್ಲೀಲ ವರ್ತನೆ ತೋರಿದ್ದಾರೆ. ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಕಾರಿನೊಳಗಿನ ದೃಶ್ಯಗಳು ಕಾಣುತ್ತಿರುವುದು ಅರಿವಿದ್ದರೂ ಲೆಕ್ಕಿಸದೇ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮಹೇಶ್ ಜೋಡಿಗೆ ತಿಳಿವಳಿಕೆ ಮೂಡಿಸಲು  ಕಾರಿನ ಬಳಿ ತೆರಳಿದ್ದು,  ಕಾರಿನ ನಂಬರ್ ಪ್ಲೇಟ್ ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ.

ಏಕಾಏಕಿ ಕಾರು ಚಲಾಯಿಸಿದ ಪರಿಣಾಮ ಕಾರಿನ ಬಾನೆಟ್ ಮೇಲೆ ಮಹೇಶ್ ಬಿದ್ದಿದ್ದಾರೆ. ಬಾನೆಟ್ ಮೇಲೆ ಸಬ್ ಇನ್ಸ್’ಪೆಕ್ಟರ್ ಇದ್ದರೂ ಲೆಕ್ಕಿಸದ ಯುವಕ ಕಾರು ರಿವರ್ಸ್ ತೆಗೆದು ವೇಗವಾಗಿ ಮುಂದೆ ಚಲಾಯಿಸಿದ್ದಾನೆ. ಇದರಿಂದಾಗಿ ಸಬ್ ಇನ್ಸ್’ಪೆಕ್ಟರ್ ಮಹೇಶ್ ಅವರಿಗೆ ಗಂಭೀರವಾಗಿ ಗಾಯವಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version