ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ: ಹೊಸ ನಿಯಮ ಹೀಗಿದೆ ನೋಡಿ

nermala setharam
23/07/2024

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. 2024ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.

ಪ್ರಮುಖವಾಗಿ ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಟಿಡಿಎಸ್ ಕಟ್ಟುವುದು ತಡವಾದರೆ ದಂಡ ಹಾಕುವುದಿಲ್ಲ ಎನ್ನಲಾಗಿದೆ. ಆದಾಯ ತೆರಿಗೆ ಕಟ್ಟೋದು ವಿಳಂಬವಾದ್ರೆ ಶಿಕ್ಷೆಯೂ ಇರಲ್ಲ. ಏಂಜಲ್ ಟ್ಯಾಕ್ಸ್ ನಿರ್ಮೂಲನೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇ–ಕಾಮರ್ಸ್ ವ್ಯವಹಾರದ ಮೇಲಿನ ತೆರಿಗೆಯೂ ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

ಆದಾಯ ತೆರಿಗೆಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ ಕೌಟುಂಬಿಕ ಪಿಂಚಣಿಗೆ ತೆರಿಗೆ ಮಿತಿ 15 ರಿಂದ 25 ಸಾವಿರಕ್ಕೆ ಏರಿಕೆ 3 ಲಕ್ಷದ ಆದಾಯದವರೆಗೆ ಯಾವುದೇ ರೀತಿ ತೆರಿಗೆ ಇರುವುದಿಲ್ಲ 3 ರಿಂದ 7 ಲಕ್ಷದ ಆದಾಯಕ್ಕೆ ಶೇಕಡ 5ರಷ್ಟು ತೆರಿಗೆ 7 ರಿಂದ 10 ಲಕ್ಷದ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ 10 ರಿಂದ 12 ಲಕ್ಷದ ಆದಾಯಕ್ಕೆ ಶೇಕಡ 15ರಷ್ಟು ತೆರಿಗೆ 12 ರಿಂದ 15 ಲಕ್ಷದ ಆದಾಯಕ್ಕೆ ಶೇಕಡ 20 ರಷ್ಟು ತೆರಿಗೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version