5:11 AM Wednesday 15 - October 2025

ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಮಾವ!

telangana
05/01/2022

ಮಂಚೇರಿಯಲ್: ಮಗನ ಆತ್ಮಹತ್ಯೆಗೆ ಸೊಸೆಯೇ ಕಾರಣ ಎಂದು ಆರೋಪಿಸಿ ಮಾವನೇ ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಗೈದಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.

ಲಿಂಗಣ್ಣಪೇಟೆಯ ಸಾಯಿಕೃಷ್ಣ, ಸೌಂದರ್ಯ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದನು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಆದರೆ, ಕಳೆದ ಐದು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಕೆಲ ದಿನಗಳ ನಂತರ ಊರಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಪ್ರೀತಿಸಿ ವಿವಾಹವಾದರೂ ಸಾಯಿಕೃಷ್ಣ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಪರೀತ ಕುಡಿತದ ಚಟಕ್ಕೊಳಗಾಗಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದ. ತನ್ನ ಮಗನ ಸಾವಿಗೆ ಸೊಸೆ ಸೌಂದರ್ಯ ಕಾರಣ ಎಂದು ಆರೋಪಿಸಿದ ಸಾಯಿಕೃಷ್ಣನ ತಂದೆ ಸೊಸೆ ಉಳಿದುಕೊಂಡಿದ್ದ ಜಗಕ್ಕೆ ತೆರಳಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ವೇಳೆ ಹತ್ಯೆಯನ್ನು ತಡೆಯಲು ಸೌಂದರ್ಯಳ ತಂದೆ ಯತ್ನಿಸಿದ್ದು, ಅವರಿಗೂ ತೀವ್ರವಾದ ಗಾಯವಾಗಿದೆ.

ಹತ್ಯೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ? | ಏನೇನು ನಿರ್ಬಂಧಗಳಿವೆ?

ತಂದೆಯ ಕತ್ತು ಸೀಳಿ ಹತ್ಯೆ ಮಾಡಿದ ಪಾಪಿ ಮಗ!

ರಾಜರ ಕಾಲದಲ್ಲಿ ಇದ್ದ “ಆರೋಗ್ಯವೇ ಭಾಗ್ಯ” ಎಂಬುದು ಸ್ವಾತಂತ್ರ್ಯ ಸಿಕ್ಕಿ ರಾಜಕಾರಣಿಗಳ ಕೈಯಲ್ಲಿ “ಆರೋಗ್ಯವೇ ವ್ಯಾಪಾರ” ಆಗಿದೆಯೇ?

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸುತ್ತೆ ವಿಡಿಯೋ

ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ? | ಬಣ್ಣದ ವರದಿಗಳ ನಡುವೆ ವಾಸ್ತವ ಸ್ಥಿತಿ ಏನು?

ಇತ್ತೀಚಿನ ಸುದ್ದಿ

Exit mobile version