11:09 PM Thursday 16 - October 2025

ಸನ್ನಿ ಲಿಯೋನ್ ಮೇಲೆ ಅರ್ಚಕರ ಕೆಂಗಣ್ಣು: ಕ್ಷಮೆ ಕೇಳದಿದ್ದರೆ ಭಾರತದಲ್ಲಿರಲು ಬಿಡಲ್ಲ ಎಂದು ಬೆದರಿಕೆ

sunny leone
27/12/2021

ಉತ್ತರಪ್ರದೇಶ:  ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಇತ್ತೀಚೆಗಿನ ವಿಡಿಯೋ ನೋಡಿ, ನಟಿಯ ವಿರುದ್ಧ ಅರ್ಚಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದ್ದು, ಈ ವಿಡಿಯೋವನ್ನು ಬ್ಯಾನ್ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮಥುರಾ ಮೂಲದ ಅರ್ಚಕರು ಸನ್ನಿ ಲಿಯೋನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಧುಬನ ಮೇ ರಾಧಿಕಾ ನಾಚೇ’ ಎಂಬ ಹಾಡಿಗೆ ಸನ್ನಿ ಲಿಯೋನ್ ಅಶ್ಲೀಲವಾಗಿ ನರ್ತಿಸಿದ್ದಾರೆ ಎನ್ನುವುದು ಅರ್ಚಕರ ಆರೋಪವಾಗಿದೆ.

ಈ ಹಾಡನ್ನು ಬ್ಯಾನ್ ಮಾಡದಿದ್ದರೆ ನಾವು ಕೋರ್ಟ್ ಗೆ ಹೋಗುತ್ತೇವೆ ಎಂದು ಬೃಂದಾವನದ ಸಂತ ನಾವಲ್ ಗಿರಿ ಮಹಾರಾಜ್ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ ಈ ದೃಶ್ಯವನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆ ಕೇಳದಿದ್ದರೆ, ಸನ್ನಿ ಲಿಯೋನ್ ಳನ್ನು ಭಾರತದಲ್ಲಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಇನ್ನೂ ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಠಾಕ್ ಕೂಡ ಸನ್ನಿ ಲಿಯೋನ್  ವಿಡಿಯೋದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬ್ರಿಜ್ ಭೂಮಿಯ ಪ್ರತಿಷ್ಠೆ ಕೆಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕರ್ನಾಟಕ ಬಂದ್ ನಡುವೆಯೇ ಇನ್ನೊಂದು ಶಾಕ್: ಡಿ.31ರಿಂದ ಕಸ ಗುತ್ತಿಗೆದಾರ ಸಂಘದಿಂದ ಅನಿರ್ದಿಷ್ಠಾವಧಿ ಮುಷ್ಕರ

ಅಭಿಮಾನಿಗಳಿಗೆ ಕೈಮುಗಿದು ಬೇಡಿಕೊಂಡ ನಿಖಿಲ್ ಕುಮಾರಸ್ವಾಮಿ | ಕಾರಣ ಏನು ಗೊತ್ತಾ?

ಪುತ್ರಿಯ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ

ನಾನು ದೊಡ್ಡ ಪೋಲಿ ಆಟ ಆಡಿ ಬಂದವನು | ಹಂಸಲೇಖ

ನ್ಯೂಡಲ್ಸ್ ತಯಾರಿಕಾ ಘಟಕದ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು: 5 ಕಿ.ಮೀ.ವರೆಗೆ ಕೇಳಿತು ಸ್ಟೋಟದ ಶಬ್ಧ!

ಕೃಷಿ ಕಾಯ್ದೆ ವಾಪಸ್ ಹೇಳಿಕೆ ನೀಡಿಯೇ ಇಲ್ಲ: ಕೇಂದ್ರ ಸಚಿವ ತೋಮರ್

 

ಇತ್ತೀಚಿನ ಸುದ್ದಿ

Exit mobile version