ಅಕ್ರಮ ಗಣಿಗಾರಿಕೆ ಪ್ರಕರಣ: ಸೋನಿಪತ್ ನ ಕಾಂಗ್ರೆಸ್ ಶಾಸಕ ಅರೆಸ್ಟ್

20/07/2024

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹರಿಯಾಣದ ಸೋನಿಪತ್ ನ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಪನ್ವಾರ್ ಅವರನ್ನು ಅಂಬಾಲಾ ಕಚೇರಿಯಿಂದ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅವರನ್ನು ಈಗ ಅಂಬಾಲಾದ ವಿಶೇಷ ನ್ಯಾಯಾಲಯದಲ್ಲಿ ರಿಮಾಂಡ್ ಗೆ ಕರೆದೊಯ್ಯಲಾಗುತ್ತದೆ. ದಿಲ್ಬಾಗ್ ಸಿಂಗ್ (ಮಾಜಿ ಶಾಸಕ) ಮತ್ತು ಪನ್ವಾರ್ ಮತ್ತು ಅವರ ಸಹಚರರು ಭಾಗಿಯಾಗಿದ್ದಾರೆ ಎನ್ನಲಾದ ಹರಿಯಾಣದ ಯಮುನಾ ನಗರ ಮತ್ತು ಪಕ್ಕದ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಮರಳು, ಬಂಡೆಗಳು ಮತ್ತು ಜಲ್ಲಿಕಲ್ಲುಗಳ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.

ಪನ್ವಾರ್ ಮತ್ತು ಇತರರ ವಿರುದ್ಧ ಹರಿಯಾಣ ಪೊಲೀಸರು ಹಲವಾರು ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ದಾಖಲಿಸಿದಾಗ ಪನ್ವಾರ್ ಒಳಗೊಂಡ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಕಳೆದ ವರ್ಷ ಜಾರಿ ನಿರ್ದೇಶನಾಲಯ ವಹಿಸಿಕೊಂಡಿತ್ತು.

ಈ ವರ್ಷದ ಜನವರಿಯಲ್ಲಿ ಜಾರಿ ನಿರ್ದೇಶನಾಲಯವು ಫರಿದಾಬಾದ್, ಸೋನಿಪತ್, ಯಮುನಾನಗರ, ಕರ್ನಾಲ್, ಚಂಡೀಗಢ ಮತ್ತು ಮೊಹಾಲಿಯ 20 ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version