ನವದೆಹಲಿ: ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ನಡುವೆ ಭಾರತಕ್ಕೆ ಸಿಹಿ ಸುದ್ದಿಯೊಂದು ಲಭಿಸಿದೆ. ಭಾರತದಲ್ಲಿ ತಯಾರಾಗುತ್ತಿರುವ ಮೂಗಿನ ಲಸಿಕೆಗಳು(Nasal Vaccines) ಕೊರೊನಾ ಮೂರನೇ ಅಲೆ ವೇಳೆಯಲ್ಲಿ ಮಕ್ಕಳಿಗೆ ಗೇಮ್ ಚೇಂಜರ್ ಆಗಬಹುದು. ಆದರೆ ಈ ವರ್ಷ...
ಬೆಂಗಳೂರು: ಅಮಾಯಕ ದಲಿತ ಯುವಕನನ್ನು ಬಂಧಿಸಿ, ಸಹಕೈದಿಯಿಂದ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಪಿಎಸ್ ಐ ಅರ್ಜುನ್ ನನ್ನು ಅಮಾನತುಗೊಳಿಸಿ ಬಂಧಿಸುವಂತೆ ವ್ಯಾಪಕವಾಗಿ ಒತ್ತಾಯಗಳು ಕೇಳಿ ಬಂದಿವೆ. ರಾಜ್ಯದಲ್ಲಿ ಇಷ್ಟೊಂದು ನೀಚ ಕೃತ್ಯ ನಡೆದಿದ್ದರೂ, ಸಿಎಂ ಯಡಿಯೂರಪ್ಪನವರಾಗ...
ಬೆಂಗಳೂರು: ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನೀವು ನನ್ನನ್ನು ಗೆಲ್ಲಿಸುತ್ತೀರಾ? ಎಂದು ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಪ್ರಶ್ನಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, “ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ ! ರೈತರಿಂದ ಬೆಳ...
ರಾಯ್ಪುರ್: ಔಷಧಿ ತರಲು ಮನೆಯಿಂದ ಹೊರ ಬಂದಿದ್ದ ಯುವಕನ ಮೊಬೈಲ್ ನ್ನು ಜಿಲ್ಲಾಧಿಕಾರಿಯೊಬ್ಬ ಹೊಡೆದು ಹಾಕಿ, ಆತನ ಕಪಾಳಕ್ಕೆ ಬಾರಿಸಿ, ಪೊಲೀಸರ ಕೈಯಿಂದಲೂ ಹೊಡೆಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಛತ್ತೀಸ್ ಗಢದ ಸುರಾಜ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ರಣ್ಬೀರ್ ಶರ್ಮಾ ಈ ಕುಕೃತ್ಯ ಎಸಗಿದವನಾಗಿದ್ದಾನೆ. ಈ ...
ಉಡುಪಿ: ಪಡುಬಿದ್ರೆ ಠಾಣೆಯ 10 ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಪೊಲೀಸ್ ಠಾಣೆಯಲ್ಲಿ ಸಮೀಪದಲ್ಲಿಯೇ ಇರುವ ಬೋರ್ಡ್ ಶಾಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ಠಾಣೆಯಲ್ಲಿ ಕೆಲವು ದಿನಗಳ ಹಿಂದೆ ಸಿಬ್ಬಂದಿಯೊಬ್ಬರ ಹುಟ್ಟು ಹಬ್ಬವನ್ನು ಆಚರಿಸಲಾಗಿತ್ತು. ಬರ್ತ್ ಡೇ ಔತಣ ಕೂಟವನ್ನೂ ಮಾಡಲಾಗಿತ್ತು. ಔತಣ ಕೂ...
ಕೊಳ್ಳೇಗಾಲ: ಅನಾರೋಗ್ಯದಿಂದ ಬೇಸತ್ತ ಶಿಕ್ಷಕಿಯೊಬ್ಬರು ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ನಡೆದಿದೆ. ಪಟ್ಟಣದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯ ಜೀವನ ದುರಂತ ಅಂತ್ಯವಾಗಿದೆ. ತಾಲೂಕಿನ ಸಿಂಗನಲ್ಲೂರು ಗ್ರಾಮದ 28 ವರ್ಷ ವಯಸ್ಸಿನ ರಮ್ಯಾ ಅವರು ಹಲವಾರು ದಿನಗಳಿಂದ ಹೊಟ್ಟೆ ...
ಚಿಕ್ಕಮಗಳೂರು: ಪುನೀತ್ ಎಂಬ ಅಮಾಯಕ ದಲಿತ ಯುವಕನನ್ನು ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿ, ಚಿತ್ರ ಹಿಂಸೆ ನೀಡಿ, ಮೂತ್ರ ಕುಡಿಸಿದ ಹೇಯ ಕೃತ್ಯ ಎಸಗಿದ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 342, 323, 504, 506, 330, 348 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣಗಳಡಿಯಲ್ಲ...
ಧಾರವಾಡ: ರಾಜ್ಯಾದ್ಯಂತ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಈ ನಡುವೆ ವೃದ್ಧೆಯೊಬ್ಬರು ತಮ್ಮ ಪ್ರೀತಿಯ ಮೇಕೆಯನ್ನು ಹೊತ್ತುಕೊಂಡು ಮೂರು ಕಿ.ಮೀ, ದೂರದಲ್ಲಿರುವ ಪಶು ಆಸ್ಪತ್ರೆಗೆ ಆಗಮಿಸಿದ್ದಾರೆ. ಧಾರವಾಡದ ಹೊರವಲಯದ ಹೆಬ್ಬಳ್ಳಿ ಅಗಸಿಯ ನಿವಾಸಿ ಶಂಕ್ರವ್ವ ಎಂಬವ ವೃದ್ಧೆ, ಗಾಯಗೊಂಡಿದ್ದ ತಮ್ಮ ಮೇಕೆಯ ಮರ...
ರಾಯಚೂರು: ರಾಜ್ಯದಲ್ಲಿ ಮೊದಲ ಬಾರಿಗೆ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಜನರಲ್ಲಿ ಮಾರಕ ವೈಟ್ ಫಂಗಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ರಾಯಚೂರಿನ ಖಾಸಗಿ ಆಸ್ಪತ್ರೆಯೊಂದರಲ್ಲೇ 6 ಜನರಲ್ಲಿ ವೈರಸ್ ಫಂಗಸ್ ಪತ್ತೆಯಾಗಿದೆ ಎಂದು ವೈದ್ಯ ಡಾ.ಮಂಜುನಾಥ್ ಅವರು ಮಾಹಿತಿ ನೀಡಿದ್...
ಚಿಕ್ಕಮಗಳೂರು: ಕೊರೊನಾ ಸಮಯದಲ್ಲಿ ಮಜಾ ಮಾಡಲು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಮೇಲೆಯೇ ಪೊಲೀಸರು ಎಫ್ ಐಆರ್ ದಾಖಲಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ, ಅರಣ್ಯಾಧಿಕಾರಿಗಳು ಪಾರ್ಟಿ ಮಾಡಲು 10ಕ್ಕೂ ಅಧಿಕ ವಾಹನಗಳಲ್ಲಿ ಬಂದಿದ್ದ...