ಮಂಗಳೂರು: ಹಿಜಾಬ್ ವಿವಾದದ ಬಳಿಕ ಮಂಗಳೂರಿನ ಹಂಪನಕಟ್ಟೆ ಬಳಿ ಇರುವ ವಿವಿ ಘಟಕದ ಕಾಲೇಜಿನಲ್ಲಿ ಇದೀಗ ಸಾವರ್ಕರ್ ಫೋಟೋ ವಿವಾದ ಆರಂಭವಾಗಿದ್ದು, ಯಾರೋ ವಿದ್ಯಾರ್ಥಿಗಳು ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದು ಇದರಿಂದಾಗಿ ಮತ್ತೆ ವಿವಾದ ಸೃಷ್ಟಿಯಾಗಿದೆ. ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳ...
ಗುಜರಾತ್ ;ಭಾರೀ ಸಂಚಲ ಮೂಡಿಸಿದ್ದ ಗುಜರಾತ್ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನಿನ್ನೆ ತಮ್ಮನ್ನೇ ತಾವು ಮದುವೆ ಮಾಡಿಕೊಂಡಿದ್ದಾರೆ. ಜೂನ್ 11 ರಂದು ಮದುವೆ ಆಗಬೇಕು ಎಂದುಕೊಂಡಿದ್ದಳು ಕ್ಷಮಾ ಬಿಂದು . ಆದರೆ ಈ ವಿವಾಹಕ್ಕೆ ಹಲವರ ವಿರೋಧ ಹಿನ್ನೆ...
ಬೆಂಗಳೂರು: ಸ್ವಾಮೀಜಿ ವೇಷ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಸ್ವಾಮೀಜಿ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು ಮತ್ತು ಮನೆಯವರು ಹಣ ಕೊಟ್ಟಿಲ್ಲ ಅಂದರೆ ಮನೆಮಂದಿಯನ್ನೆಲ್ಲ ನಿಂದಿಸುತ್ತಿದ್ದರು ಎನ್ನಲಾಗಿದೆ. ಅರಸೀಕೆರೆಯ ರ...
ದೆಹಲಿ: ಮಗಳು ಹೋಮ್ ಮಾಡಲಿಲ್ಲ ಎನ್ನುವ ಕೋಪದಿಂದ ತಾಯಿಯೊಬ್ಬಳು ತನ್ನ 6 ವರ್ಷ ವಯಸ್ಸಿನ ಮಗಳ ಕೈ ಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಟೆರೆಸ್ ನಲ್ಲಿ ಮಲಗಿಸಿದ ಅಮಾನವೀಯ ಘಟನೆ ಘಟನೆ ದೆಹಲಿಯ ಕಾರವಾರ ನಗರದಲ್ಲಿ ನಡೆದಿದೆ. ದೆಹಲಿಯ ಬಿಸಿಲಿನ ಬೇಗೆಯಲ್ಲಿ ಮಗು ತಾಸುಗಟ್ಟಲೆ ಟೆರೇಸ್ ಮೇಲೆ ಮಲಗಿ ಅಳುತ್ತಿದ್ದು, ಮಗು ಅಳುತ್ತಿರುವ ದೃಶ್ಯಗಳು...
ತಿರುವನಂತಪುರಂ: ತಿರುವನಂತಪುರದಲ್ಲಿ ಜೀರುಂಡೆ ಜ್ವರದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮೃತರನ್ನು ವರ್ಕಳ ಮೂಲದ ಅಶ್ವತಿ (15) ಎಂದು ಗುರುತಿಸಲಾಗಿದೆ. ವಾರದ ಹಿಂದೆ ಜ್ವರ, ವಾಂತಿ ಕಾಣಿಸಿಕೊಂಡು ಅಶ್ವತಿ ಅವರನ್ನು ವರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಅಧಿಕಾರಿಗಳು ಔಷಧ ನೀಡಿ ಮನೆಗೆ ಕಳುಹಿಸಿದ್ದು, ಮ...
ನಟಿ ನಯನತಾರಾ, ನಿರ್ದೇಶಕ ಮತ್ತು ನಿರ್ಮಾಪಕ ವಿಘ್ನೇಶ್ ಶಿವನ್ ಇಂದು ವಿವಾಹವಾಗಲಿದ್ದಾರೆ. ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ರೆಸಾರ್ಟ್ನಲ್ಲಿ ಹಿಂದೂ ಸಂಪ್ರದಾಯದಲ್ಲಿ ಸಮಾರಂಭಗಳು ನಡೆಯುತ್ತವೆ. ದಂಪತಿಯ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮಾಧ್ಯಮದವರಿಗೂ ಸೇರಿದಂತೆ ಇತರ ಯಾರಿಗೂ ...
ಅಹಮದಾಬಾದ್: ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸರಬರಾಜು ಸಂಸ್ಥೆ ಮೆಕ್ ಡೊನಾಲ್ಡ್ಸ್ ಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿ...
ಪ್ರೇಯಸಿಯೊಂದಿಗೆ ಜಗಳವಾಡಿದ ಯುವಕ ತೀವ್ರವಾಗಿ ಆಕ್ರೋಶಗೊಂಡು ಮ್ಯೂಸಿಯಂಗೆ ನುಗ್ಗಿ ಕೋಟ್ಯಂತರ ಮೌಲ್ಯದ ಪುರಾತನ ವಸ್ತುಗಳನ್ನು ನಾಶಪಡಿಸಿದ ಘಟನೆ ಅಮೆರಿಕದ ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ ನಲ್ಲಿ ನಡೆದಿದೆ. 21 ವರ್ಷದ ಬ್ರಿಯಾನ್ ಹೆರ್ನಾಂಡೆಜ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಅಕ್ರಮವಾಗಿ ಪ್ರವೇಶಿಸಿ ಅಲ್ಲಿದ್ದ 38.35 ಕೋಟಿ ರೂ.ಮೌಲ್ಯದ ...
ಚೆನ್ನೈ: ತಮಿಳುನಾಡಿನಲ್ಲಿ ಆನ್ ಲೈನ್ ರಮ್ಮಿ ಆಟಕ್ಕೆ ವ್ಯಸನಿಯಾಗಿದ್ದ ಮಹಿಳೆಯೊಬ್ಬಳು ಲಕ್ಷಾಂತರ ರೂ. ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ಮಹಿಳೆ ತೊರೈಪಾಕ್ಕಂನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಲಾಕ್ ಡೌನ್ ಸಮಯದಲ್ಲಿ ಭವಾನಿ ಆನ್ ಲೈನ್ನಲ್...
ಬೆಂಗಳೂರು: ರಾಜ್ಯದ ಎಲ್ಲಾ ಆರೆಸ್ಸೆಸ್ ಕಚೇರಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆಯನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆರೆಸ್ಸೆಸ್ ಕಚೇರಿಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರ...