3:30 AM Thursday 16 - October 2025

ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!

dallas museum
08/06/2022

ಪ್ರೇಯಸಿಯೊಂದಿಗೆ ಜಗಳವಾಡಿದ ಯುವಕ ತೀವ್ರವಾಗಿ ಆಕ್ರೋಶಗೊಂಡು ಮ್ಯೂಸಿಯಂಗೆ ನುಗ್ಗಿ ಕೋಟ್ಯಂತರ ಮೌಲ್ಯದ ಪುರಾತನ ವಸ್ತುಗಳನ್ನು ನಾಶಪಡಿಸಿದ ಘಟನೆ ಅಮೆರಿಕದ ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ ನಲ್ಲಿ ನಡೆದಿದೆ.

21 ವರ್ಷದ ಬ್ರಿಯಾನ್ ಹೆರ್ನಾಂಡೆಜ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಅಕ್ರಮವಾಗಿ ಪ್ರವೇಶಿಸಿ ಅಲ್ಲಿದ್ದ 38.35 ಕೋಟಿ ರೂ.ಮೌಲ್ಯದ ವಸ್ತುಗಳನ್ನು ನಾಶಪಡಿಸಿದ್ದಾನೆ. ಬ್ರಿಯಾನ್ ಹೆರ್ನಾಂಡೆಜ್ ನಾಶಪಡಿಸಿದ ಕಲಾಕೃತಿಗಳು ಅಮೂಲ್ಯವಾದ ಪ್ರಾಚೀನ ಗ್ರೀಕ್ ಮತ್ತು ಸ್ಥಳೀಯ ಅಮೆರಿಕನ್ ಕಲಾಕೃತಿಗಳನ್ನು ಒಳಗೊಂಡಿವೆ.

ಬುಧವಾರ ರಾತ್ರಿ ಈತ ಮ್ಯೂಸಿಯಂಗೆ ನುಗ್ಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.  ರಾತ್ರಿ 9:40ರ ಸುಮಾರಿಗೆ ಹೆರ್ನಾಂಡೆಜ್ ಮ್ಯೂಸಿಯಂಗೆ ಬಂದು  ಕಬ್ಬಿಣದ ಕುರ್ಚಿಯಿಂದ ಎರಡು ಗಾಜಿನ ಪಂಜರಗಳನ್ನು ಒಡೆದುಹಾಕಿದ್ದಾನೆ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಹಲವಾರು ಬೆಲೆಬಾಳುವ ಪ್ರಾಚೀನ ವಸ್ತುಗಳನ್ನು ನಾಶಪಡಿಸಿದ್ದಾನೆ ಎನ್ನಲಾಗಿದೆ.

ಆರನೇ ಶತಮಾನದ ಗ್ರೀಕ್ ಮಡಿಕೆ ಮತ್ತು ಕ್ರಿ.ಪೂ. 450ರ ಕಾಲದ್ದು ಎಂದು ನಂಬಲಾದ ಒಂದು ಜಾರ್ ನ್ನು ಯುವಕ ಚಿದ್ರ ಗೊಳಿಸಿದ್ದಾನೆ. ಈ ಎರಡು ವಸ್ತುಗಳು ಬರೋಬ್ಬರಿ ಕೋಟಿಗಟ್ಟಲೆ ಮೌಲ್ಯದ್ದು ಎಂದು ವರದಿಯಾಗಿದೆ. ಮ್ಯೂಸಿಯಂನಲ್ಲಿ ಹೆರ್ನಾಂಡೆಜ್ ನಾಶಪಡಿಸಿದ ವಸ್ತುಗಳ ಪೈಕಿ “ಕೈಲಿಕ್ಸ್ ಹೆರಾಕಿಲ್ಸ್ ಅಂಡ್ ನೆಮಿಯಾನ್ ಲಯನ್ “ಎಂಬ ಪ್ರತಿಮೆಯೂ ಇದೆ. ಇದರ ಮೌಲ್ಯ 100,000.  ಡಾಲರ್.

ಇದರ ಹೊರತಾಗಿಯೂ, ಹ್ಯಾಂಡ್ ಸ್ಯಾನಿಟೈಸರ್ ಸ್ಟ್ಯಾಂಡ್  ತೆಗೆದುಕೊಂಡು ಮತ್ತೊಂದು ಪ್ರತಿಮೆಯನ್ನು ಹೊಂದಿದ್ದ ಗಾಜನ್ನು ಒಡೆದು ಹಾಕಿದ್ದಾನೆ. ಗಾಜಿನ ಬಾಕ್ಸ್ ಒಡೆದು ಪ್ರತಿಮೆಯನ್ನು ಹೊರಗಡೆ ತೆಗೆದು ನೆಲಕ್ಕೆ ಎಸೆದು ಹುಚ್ಚಾಟ ಮೆರೆದಿದ್ದಾನೆ. ಈತ ನಾಶಪಡಿಸಿದ ವಸ್ತುಗಳ ಮೌಲ್ಯವು 10,000 ಡಾಲರ್ ಎಂದು ಅಂದಾಜಿಸಲಾಗಿದೆ.

ಘಟನೆಯ ಬಳಿಕ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರೇಯಸಿಯ ಮೇಲಿನ ಸಿಟ್ಟು ತೀರಿಸಿಕೊಳ್ಳಲು ಈ ಕೃತ್ಯ ಮಾಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳೆಯನ್ನು ಬಲಿ ಪಡೆದ ಆನ್‌ ಲೈನ್ ರಮ್ಮಿ ಆಟ:  ರಮ್ಮಿ ವ್ಯಸನಿಗಳೇ ಎಚ್ಚರ!

ರಾಜ್ಯದ ಎಲ್ಲಾ ಆರೆಸ್ಸೆಸ್ ಕಚೇರಿಗಳಿಗೆ ಪೊಲೀಸ್ ರಕ್ಷಣೆ: ಆರಗ ಜ್ಞಾನೇಂದ್ರ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್

ಭಾರತಕ್ಕೆ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ!

ಇತ್ತೀಚಿನ ಸುದ್ದಿ

Exit mobile version