ಅಜ್ಮೀರ್: ಮಗನ ಸಾವಿನ ಸುದ್ದಿ ಕೇಳಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಪುತ್ರ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರೆ, ತಾಯಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ...
ಕೋಲ್ಕತ್ತಾ: ನಕಲಿ ಕೊವಿಡ್ ಲಸಿಕೆ ಪಡೆದ ಕಾರಣ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಪಶ್ಚಿಮ ಬಂಗಾಳ ಸಂಸದೆಯಾಗಿರುವ ಮಿಮಿ ಚಕ್ರವರ್ತಿ ನಾಲ್ಕು ದಿನಗಳ ಹಿಂದೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪ...
ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿರುವುದರ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ರಶೀದ್ ಟಿಪ್ಪು ಎಂಬ ವ್ಯಕ್ತಿಯು ಮಾಡಿರುವ ಪೋಸ್ಟ್ ನಲ್ಲಿ ರಾಜಕೀಯ ಟೀಕೆಗಳು ಹಾಗೂ ವೈಯಕ್ತಿಕ ಅವಹ...
ಜೈಪುರ: ಮದುವೆ ಎಂದರೆ ಸಾಕು, ವರನ ಕಡೆಯವರು ಹೇಳಿದ್ದೇ ನಡೆಯಬೇಕು. ಅವರು ಹೇಳಿದ ಒಂದು ಮಾತಿಗೆ ಒಪ್ಪದಿದ್ದರೆ, ಮದುವೆ ಮುರಿಯುವುದು ಪಕ್ಕಾ. ಹೀಗಾಗಿ ಮದುವೆ ಸಂದರ್ಭದಲ್ಲಿ ವಧುವಿನ ಕಡೆಯವರು ವರನ ಕಡೆಯವರಿಗೆ ತಗ್ಗಿಬಗ್ಗಿ ನಡೆಯುವ ಸಂಪ್ರದಾಯವೋ, ಶೋಷಣೆಯೋ ಇನ್ನೂ ನಡೆಯುತ್ತಲೇ ಇದೆ. ಒಡಿಶಾದಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಮಟನ್ ಕರಿ...
ವಾಷಿಂಗ್ಟನ್: ವರ್ಣಬೇಧ ಆಚರಿಸುವ ಮೂಲಕ, ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರನ್ನು ಹತ್ಯೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿ ಈ ಬಗ್ಗೆ ಭಾರೀ ಹೋರಾಟಗಳೇ ನಡೆದು ಹೋಗಿತ್ತು. ಇದೀಗ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ ಇಲ್ಲಿನ ನ್ಯಾಯಾಲಯ ಭಾರೀ ಶಿಕ್ಷೆಯನ್ನ...
ಬೆಂಗಳೂರು: ಎಂತಹ ಗಂಭೀರ ವಿಚಾರಗಳಿದ್ದರೂ ಕಾಂಗ್ರೆಸ್ ನ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅದನ್ನು ಬಹಳ ವ್ಯಂಗ್ಯವಾಗಿ ಜನರಿಗೆ ಅರ್ಥ ಮಾಡಿಸುವುದರಲ್ಲಿ ನಿಸ್ಸೀಮರು. ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಮೂಲ, ವಲಸಿಗೆ ಎಂಬೆಲ್ಲ ಚರ್ಚೆಗಳನ್ನು ಸಿಎಂ ಇಬ್ರಾಹಿಂ ವಿಶೇಷವಾಗಿ ವಿವರಿ...
ಚಿಕ್ಕಮಗಳೂರು: ಅರ್ಚಕ ಹಾಗೂ ಅರ್ಚಕನ ಪುತ್ರನಿಗೆ ಜಮೀನು ವಿಚಾರದಲ್ಲಿ ನಡೆದ ಗಲಾಟೆಯ ಸಂದರ್ಭ ಚಪ್ಪಲಿಯಲ್ಲಿ ಥಳಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅರ್ಚಕ ಚೆನ್ನಕೇಶವಯ್ಯ ಮತ್ತು ಅವರ ಪುತ್ರ ರಂಗನಾಥ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ರಾಜಪ್ಪ, ಶೇಖರಪ್ಪ, ...
ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳು ಹತ್ಯೆಗೀಡಾಗಿರುವ ರೇಖಾ ವಿರುದ್ಧವೇ ಗಂಭೀರವಾದ ಆರೋಪವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ರೇಖಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದೆ. ಪುರುಷೋತ್ತಮ...
ಸಿನಿಡೆಸ್ಕ್: ಆರೋಗ್ಯ ತಪಾಸಣೆಗೆ ಅಮೆರಿಕದ ಮಯೋ ಕ್ಲಿನಿಕ್ ಗೆ ತೆರಳಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ರಜನಿಕಾಂತ್ ಜೊತೆಗೆಯಲ್ಲಿ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ಕೂಡ ಇದ್ದಾರೆ. 2016ರಲ್ಲಿ ರಜನಿಕಾಂತ್ ಮೂತ್ರಪಿಂಡದ ಕಸಿ ಚಿಕಿತ್ಸೆಗೊಳಗಾಗಿದ್ದರು. ಇದೀಗ ನಿಯಮಿತ ತಪಾಸಣೆಗಾಗಿ ಅವರು ಮಯೋ ಆಸ್ಪ...
ರಾಣೆಬೆನ್ನೂರು: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಜಾತಿ ಪೀಡಕನೋರ್ವ ಅಡ್ಡಿಪಡಿಸಿದ್ದರಿಂದ ದಲಿತ ಕುಟುಂಬವೊಂದು ಗ್ರಾಮ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಲಿತ ಕುಟುಂಬವೊಂದರ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಕುಟುಂಬಸ್ಥರು...