ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈನ್ ಶಾಪ್ ಬಳಿ ಇಬ್ಬರು ಓಡಾಡಿರುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಇ ಹರಿದಾಡುತ್ತಿದ್ದು, ಈ ಸಂಬಂಧ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮದ್ಯದಂಗಡಿ ಬಳಿ ಓಡಾಡಿದ ಇಬ್ಬರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ....
ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಅವರು ಆರೋಪಿಸಿದರು. ಕರ್ನಾಟಕದಲ್ಲಿ...
ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಸೋಶಿಯಲ್ ಮಿಡಿಯಾ ಸ್ಟಾರ್ ರೋಹಿತ್ ಭಾಟಿ ಸಾವನ್ನಪ್ಪಿದ್ದು, ಅತೀಯಾದ ವೇಗವೇ ಅಪಘಾತಕ್ಕೆ ಕಾರಣವಾಯ್ತೆ ಅನ್ನೋ ಅನುಮಾನ ಸೃಷ್ಟಿಯಾಗಿದೆ. 25 ವರ್ಷದ ರೋಹಿತ್ ಭಾಟಿ ಗ್ರೇಟರ್ ನೋಯ್ದಾ ಹೈವೇ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊ...
ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಶವ ಮನೆ ಅಂಗಳದಲ್ಲಿ ಬಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು ಇದು ಕೊಲೆಯೋ ಅಥವಾ ಇನ್ನೇನಾರೂ ಬೇರೆ ಘಟನೆಗಳು ನಡೆದಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ನಿಖರವ...
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ತಾಲೂಕಿಗೆ ಮುಕುಟಪ್ರಾಯದಂತಿರುವ ನಡ ಗ್ರಾಮದ ಗಡಾಯಿಕಲ್ಲು(ಜಮಲಾಬಾದ್ ಗಡ) ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವುದರಿಂದ ಇಲ್ಲಿಗೆ ಬರುವ ಮಕ್ಕಳಿಗೆ ರೂ.25 ದೊಡ್ಡವರಿಗೆ ರೂ.50 ದರವನ್ನು ಇಲಾಖೆ ನಿಗದಿ ಪಡಿಸಿದೆ. ಇಲ್ಲಿ ಪ್ರವಾಸಿಗರಿಂದ ರಶೀದಿ ನೀಡದೆ ಹಣ ಪಡ...
ಕೊಲಂಬಿಯಾದ 2ನೇ ಅತಿದೊಡ್ಡ ನಗರ ಮೆಡೆಲಿನ್'ನ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಜನ ವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಮೇಯರ್ ಡೇನಿಯಲ್ ಕ್ವಿಂಟೆರೊ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್ ನ ವಸತಿ ಪ್ರದೇಶಕ್ಕೆ ಸಣ್ಣ ವಿಮಾನವೊಂದು ಸೋಮವಾರ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ. ಸಂತ್...
ಬೆಂಗಳೂರು: ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ, ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ಮಾಡುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ವಿಚಾರವಾಗಿ ಪ್ರತ...
ನವದೆಹಲಿ: ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅರೀಜ್ ಪಿರೋಜ್ ಶಾ ಖಂಬಟ್ಟಾ ಅವರು ಅಹ್ಮದಾಬಾದ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪೆನಿ ಸೋಮವಾರ ಮಾಹಿತಿ ನೀಡಿದೆ. 85 ವರ್ಷದ ವಯಸ್ಸಿನ ಅರೀಜ್ ಪಿರೋಜ್ ಶಾ ಖಂಬಟ್ಟಾ ದೀರ್ಘಕಾಲದ ಅನಾರೋಗ್ಯದೊಂದ ಬಳಲುತ್ತಿದ್ದರು. ನವೆಂಬರ್ 19ರಂದು ಅವರು ಕೊನೆಯುಸಿರೆಳೆದಿದ್ದಾರೆ. ಅವ...
ಗುಜರಾತ್ ನ ಮೊರ್ಬಿ ಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ತೂಗು ಸೇತುವೆ ಕುಸಿತದಿಂದಾದ 135 ಜನರ ಸಾವಿನ ಘಟನೆ ಹಿಂದಿರುವ ''ನಿಜವಾದ ಅಪರಾಧಿಗಳು' ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ರಾಜ್ ಕೋಟ್ ನಲ್ಲಿ ಚುನಾವಣಾ ಪ್ರಚಾರದಲ್...
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಧರ್ಮಸ್ಥಳ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ 26 ಕೋಟಿ ವೆಚ್ಚದ ನೂತನ ಯೋಜನೆಗೆ ರಾಜ್ಯ ಸರಕಾರದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನೂತನ ಕುಡಿಯುವ ನೀರಿನ ಯೋಜನೆ ಅನು...