ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿಯೊಬ್ಬರು ಪಾಳು ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ಸೆ.4ರಂದು ನಡೆದಿದೆ. ಮೃತರನ್ನು ಯಡ್ತರೆ ಸಮುದಾಯ ಆಸ್ಪತ್ರೆ ಬಳಿಯ ನಿವಾಸಿ ಅಚ್ಚುತ ಎಂ(59) ಎಂದು ಗುರುತಿಸಲಾಗಿದೆ. ಇವರು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಟೆಂಡರ್ ಆಗಿ ಕರ...
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಂತಿಮ ಬಿ.ಎಸ್ಸಿ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿದ್ಯಾರ್ಥಿ ಚೇತನ್ ಎಂ. ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಸ್ಸಾಂನ ದಿಬ್ರುಗಢ್ನ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR RMRCNE) ನಲ್ಲಿ ಎಂ.ಎಸ್ಸಿಗೆ ಮಾಸಿಕ ರೂ. 20,000 ಫೆಲೋಶಿಪ್...
ಬೆಳ್ತಂಗಡಿ: ನಾಲ್ಕು ದಿನದ ಹಿಂದೆ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದ ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣ ಕೊಲೆ ಎಂದು ಇದೀಗ ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದು, ಕೊಲೆ ಆರೋಪದಲ್ಲಿ ಮಹಿಳೆಯ ಪತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಮೋಹಿನಿ(36)ಮೃತಪಟ್ಟವರಾಗಿದ್ದು ಕೊಲೆ ಆರೋಪದಲ...
ಮಂಗಳೂರು: 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನ ಆಜಾದ್ ಮಾದರಿ ಶಾಲೆಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲ್ಲಾಪು ಪಟ್ಲದ ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ಉಳಾಯಿಬೆಟ್ಟು ಮೌಲಾನಾ ಆಜಾದ್ ಮಾದರಿ ಶಾಲೆಗೆ ಕನ್ನಡ ಮತ್ತು ವಿಜ್...
ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ರವಿವಾರ ಮುಂಜಾನೆ ಎರಡು ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಕು.ಸಂಧ್ಯಾ ಅವರು ದಾಳಿ ನಡೆಸಿ 4 ಲಾರಿ ಸಹಿತ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶಕ್ಕೆ ಪಡೆದಿದ್ದಾರೆ. ಉಡುಪಿ ಗಣಿ ಮತ...
ಮಂಗಳೂರು: ಮಂಗಳೂರಿನ ಕೋರ್ ಕಮಿಟಿ ಸಭೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರು ಕೋರ್ ಕಮಿಟಿ ಸದಸ್ಯರ ಜೊತೆ ಪರಿಚಯಾತ್ಮಕವಾಗಿ ಮಾತನಾಡಿದ್ದಾರೆ. ಎಲ್ಲರನ್ನೂ ಪರಿಚಯ ಮಾಡಿ ಕೆಲ ಹೊತ್ತು ಮಾತನಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಮನೆ ಮನೆಗೆ ತಲುಪಿಸಲು ಹೇಳಿದ್...
ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಸಾವಿಗೀಡಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿ...
ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಒಬ್ಬರಿಗೆ ಗಾಯ ಹಾಗೂ ಎರಡು ಕಾರುಗಳು ಜಖಂಗೊಳ್ಳಲು ಕಾರಣರಾದ ಚಾಲಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಬ್ಯಾರೆಲ್ಸ್ ಪಬ್ ಹೊರಗಡೆ ಶನಿವಾರ ತಡರಾತ್ರಿ ವೇಳೆ ನಡೆದಿದೆ. ಅಪಘಾತ ಪಡಿಸಿದ ಕಾರು ಚಾಲಕ ಸುಹಾಸ್ ಹಾಗೂ ...
ಮಂಗಳೂರು: ಇತ್ತೀಚೆಗೆ ನಿಧನರಾದ ಅಂಬೇಡ್ಕರ್ ವಾದಿ, ಸಾಮಾಜಿಕ ಪರಿವರ್ತನಾ ಚಳುವಳಿಯ ನೇತಾರರಾದ ಪಿ.ಡೀಕಯ್ಯ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪಿ.ಡೀಕಯ್ಯನವರ ನಿವಾಸದಲ್ಲಿ ನಡೆಯಿತು. ಬೋಧಿರತ್ನ ಭಂತೇಜಿ ರವರ ನೇತೃತ್ವದಲ್ಲಿ ಪುಣ್ಯಾನುಮೋದನಾ ಕಾರ್ಯಕ್ರಮ ನಡೆಯಿತು. ಬೌದ್ಧ ಧಾರ್ಮಿಕ ಕಾರ್ಯಕ್ರ...
ರಾಮನಗರ: ತಾಯಿಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ. ರೂಪಾ(30) ಹಾಗೂ ಅವರ ಮಕ್ಕಳಾದ 6 ವರ್ಷ ವಯಸ್ಸಿನ ಹರ್ಷಿತಾ, 4 ವರ್ಷದ ಸ್ಪೂರ್ತಿ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದು, ತಾಯಿ ಮಕ್ಕಳಿಗೆ ವ...