ಗಾಂಜಾ ಸೇವನೆ ಸಂಬಂಧಿಸಿ ಆರು ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದ ಘಟನೆ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್ ನಲ್ಲಿ ಆ.20ರಂದು ನಡೆದಿದೆ. ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್ ಹಾಗೂ ಆದಿತ್ಯ ಬರಂಬೆ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು. ಇವರು ಬೀಚ್ ನಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ...
ಕುಂದಾಪುರದಿಂದ ಭಟ್ಕಳಕ್ಕೆ ಗೋ ಮಾಂಸ ಸಾಗಾಟ ಮಾಡುತ್ತಿದ್ದ ನ್ಯಾನೋಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದು ಪರಾರಿಯಾಗಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಆ.20ರಂದು ನಡೆದಿದೆ. ಭಟ್ಕಳ ನಿವಾಸಿ 37ವರ್ಷದ ಮಹಮ್ಮದ್ ಗೌಸ್ ಗವಾಯಿ...
ವೀರಾಜಪೇಟೆಯಲ್ಲಿ ಮಾಂಸದೂಟ ಮಾಡಿ ಸಿದ್ದರಾಮಯ್ಯನವರು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸ ಎಂದಿದ್ದಾರೆ. ನಾಟಿ ಕೋಳಿ ಊಟ ಮಾಡಿ ಸಿದ್ದರಾಮಯ್ಯ ಬಸವ ದೇವಸ್ಥಾನಕ್ಕೆ ಹೋಗಿದ್ದೀರಿ ಎಂದು ಅಪ್ಪಚ್ಚು ರಂಜನ್...
ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆಗುತ್ತಿದ್ದಂತೆಯೇ ಇದೀಗ ಆರ್ಯವರ್ಧನ್ ಪಾತ್ರಕ್ಕೆ ನಟರ ಹುಡುಕಾಟ ಆರಂಭವಾಗಿದೆ. ನಟರ ಪಟ್ಟಿಯಲ್ಲಿ ಮೂರು ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಖ್ಯಾತ ನಟ ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಸೂಕ್ತವಾಗುತ್ತಾರೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಝೀ ಕನ್ನಡದ ಜೊತೆಗ...
ಬೆಳ್ತಂಗಡಿ: ಚಾರ್ಮಾಡಿಯ ಮಸೀದಿಯ ಬಾತ್ ರೂಂ ಒಂದರಲ್ಲಿ ಶನಿವಾರ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಕಂಡು ಬಂದಿದೆ. ಕಾಳಿಂಗ ಸರ್ಪವನ್ನು ಕಂಡ ತಕ್ಷಣವೇ ಮಸೀದಿಯವರು ಕಕ್ಕಿಂಜೆಯ ಉರಗ ರಕ್ಷಕ ಸ್ನೇಕ್ ಅನಿಲ್ ಅವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಅನಿಲ್ ಅವರು ಈಗಾ...
ಬೆಂಗಳೂರು: ಆ್ಯಕ್ಟೀವಾ ಹೋಂಡಾಗೆ ಅಪರಿಚಿತರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರೆ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಜಂಕ್ಷನ್ ಬಳಿಯಲ್ಲಿ ನಡೆದಿದೆ. 23 ವರ್ಷದ ಶ್ವೇತಾ ಮೃತಪಟ್ಟ ಮಹಿಳೆಯಾಗಿದ್ದಾರೆ. ನವವಿವಾಹಿತರಾಗಿದ್ದ ಶ್ವೇತಾ ಹಾಗೂ ಆನಂದ್ ನೆನ್ನೆ ರಾತ್ರಿ ಫಿಲ್ಮ್ ನೋಡಿಕೊಂಡು ವಾಪಾಸಾಗುವ ವೇಳೆ...
ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವು 100 ಕೋಟಿ ಕ್ಲಬ್ ಸೇರಿಕೊಂಡಿದ್ದು, ಆರಂಭದಲ್ಲಿ ಸೋಲು ಕಂಡಿತು ಅಂದುಕೊಂಡಿದ್ದ ಚಿತ್ರ ಇದೀಗ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಬಾಲಿವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳು ನಿರಂತರ ಸೋಲು ಅನುಭವಿಸುತ್ತಿದ್ದು, ದಕ್ಷಿಣ ಭಾರತದ ಚಿತ್ರಗಳ ಅಬ್ಬರಕ್ಕೆ ಬಾಲಿವುಡ್ ನ ಜನಪ್ರಿಯತೆ ಕ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ, ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ‘ಲಕ್ಕಿ ಮ್ಯಾನ್’ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಿ...
ಜಿ.ಕೃಷ್ಣ ಬೆಳ್ತಂಗಡಿ ನಿರ್ದೇಶನದ ದ.ಕ.ಜಿಲ್ಲೆಯ ನೈಜ ಘಟನೆ ಪ್ರೇರಿತ ಚಿತ್ರ ಬೆಳ್ತಂಗಡಿ: ಜಿ.ಕೃಷ್ಣ ಬೆಳ್ತಂಗಡಿ ಅವರ ನಿರ್ದೇಶನದ 'ರಿಪ್ಪರ್' ಸಿನಿಮಾದ ಮೊದಲ ಪೋಸ್ಟರ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜಿ. ಕೃಷ್ಣ ಬೆಳ್ತಂಗಡಿ ನಿರ್ದೇಶನದ ಎರಡನೇ ಚಿತ್ರ '...
ಉಡುಪಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನ ಪಥಸಂಚಲನದಲ್ಲಿ ಕರ್ನಾಟಕ ಆಂಡ್ ಗೋವಾ ಎನ್ಸಿಸಿ ತಂಡವನ್ನು ಉಡುಪಿಯ ಮೆಹಕ್ ಫಾತಿಮಾ ಶೈಖ್ ಪ್ರತಿನಿಧಿಸಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಈಕೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಐಡಿಸಿ (ಇಂಡಿಪೆಂ...