4:47 AM Friday 11 - September 2026

ಡಿ.ವೀರೇಂದ್ರ ಹೆಗ್ಗಡೆಯವರಿಂದ  ‘ರಿಪ್ಪರ್’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ

rippar
21/08/2022

ಜಿ.ಕೃಷ್ಣ ಬೆಳ್ತಂಗಡಿ ನಿರ್ದೇಶನದ ದ.ಕ.ಜಿಲ್ಲೆಯ ನೈಜ ಘಟನೆ ಪ್ರೇರಿತ ಚಿತ್ರ

ಬೆಳ್ತಂಗಡಿ:  ಜಿ.ಕೃಷ್ಣ  ಬೆಳ್ತಂಗಡಿ ಅವರ ನಿರ್ದೇಶನದ ‘ರಿಪ್ಪರ್’   ಸಿನಿಮಾದ ಮೊದಲ ಪೋಸ್ಟರ್ ಅನ್ನು  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಜಿ. ಕೃಷ್ಣ ಬೆಳ್ತಂಗಡಿ ನಿರ್ದೇಶನದ ಎರಡನೇ ಚಿತ್ರ ‘ರಿಪ್ಪರ್’ ಬಹು ನಿರೀಕ್ಷೆಯ ಸಿನಿಮಾವಾಗಿದ್ದು, ಇದರ ಮೊದಲ ಪೋಸ್ಟರ್ ಅನ್ನು ನೂತನ ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

ಸಿನಿಮಾ, ನಿರ್ಮಾಣ, ಚಿತ್ರೀಕರಣ, ಸ್ಥಳಗಳು, ಕಲಾವಿದರು ಹೀಗೆ ಅನೇಕ ವಿಚಾರಗಳನ್ನು ನಿರ್ದೇಶಕ ಕೃಷ್ಣ ಬೆಳ್ತಂಗಡಿ ಇವರಿಂದ ಪಡೆದ ಹೆಗ್ಗಡೆಯವರು ಸಿನಿಮಾದ ಯಶಸ್ಸಿಗೆ ಶುಭ ಹಾರೈಸಿದರು.

ಅಲ್ಲದೇ ಶ್ರೀ ಮಂಜುನಾಥ ಸ್ವಾಮಿಯ ‘ಪೆಂಡೆಂಟ್’ ನೀಡಿ ಹರಸಿದರು. ಈ ಸಂದರ್ಭದಲ್ಲಿ ಸಿನಿಮಾದ ದಕ್ಷಿಣ ಕನ್ನಡ ವಿಭಾಗ ನಿರ್ವಹಕರಾದ ಬಿ.ಹೆಚ್. ರಾಜು ಉಪಸ್ಥಿತರಿದ್ದರು.

‘ರಿಪ್ಪರ್’ ಚಲನಚಿತ್ರವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೈಜ ಘಟನೆಯೊಂದರಿಂದ ಪ್ರೇರಿತವಾದ ಸಿನಿಮಾವಾಗಿದ್ದು, ಜಿ.ಕೆ. ರಿಯಲ್ ಇಮೇಜಸ್ ಮತ್ತು ಶ್ರೀ ಗುರುರಾಯ ಪ್ರೊಡಕ್ಷನ್ಸ್ ಇವರಿಂದ ನಿರ್ಮಾಣಗೊಂಡ ಭರವಸೆಯ ಸಿನಿಮಾವಾಗಿದೆ.

ಅನಿಲಕುಮಾರ್ ಛಾಯಾಗ್ರಹಣ, ಹಿತನ್ ಹಾಸ್ಸನ್ ಸಂಗೀತ, ಆರ್ಯನ್ ಮುಕ್ತಾರಾಜು ಸಂಕಲನ ಈ ಸಿನಿಮಾಕ್ಕೆ ಇದೆ. ಪ್ರಮುಖ ತಾರಾಗಣದಲ್ಲಿ ಕೌಸ್ತುಬ್ ಜಯರಾಮ್, ಅಮುಲ್ ಗೌಡ, ಶ್ರೀರಾಮ್, ಸಾನ್ವಿ, ಅರ್ಪಿತಾ ಬಿ.ಜಿ, ಶಿವಕುಮಾರ್ ಆರಾಧ್ಯ, ಗಜಾನನ ಹೆಗ್ಡೆ ವಿಭಿನ್ನ ಅಭಿನಯದೊಂದಿಗೆ ಇದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version