3:12 AM Thursday 16 - October 2025

ಬಿಟ್ಟಿಯಾಗಿ ಹೊಸ ಸಿನಿಮಾ ನೋಡಲು ಇನ್ನು ಸಾಧ್ಯವಿಲ್ಲ: ತಮಿಳ್ ರಾಕರ್ಸ್ ಅಡ್ಮೀನ್ ಅರೆಸ್ಟ್!

tamil rockers admin
28/07/2024

ತಿರುವನಂತಪುರಂ: ತಮಿಳ್​ ರಾಕರ್ಸ್​​(Tamil Rockers) ಅಡ್ಮೀನ್ ನ್ನು ಪೊಲೀಸರು ಬಂಧಿಸಿದ್ದು, ಕಳೆದ ಹಲವು ವರ್ಷಗಳಿಂದಲೂ ಸಿನಿಮ ನಿರ್ಮಾಪಕರಿಗೆ ವಿಲನ್ ಆಗಿದ್ದ ತಮಿಳ್​ ರಾಕರ್ಸ್​​ ವೆಬ್​ಸೈಟ್​ ಅಡ್ಮಿನ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸ್ಟೀಫನ್ ರಾಜ್​ ಬಂಧಿತ ಆರೋಪಿಯಾಗಿದ್ದು, ಕೇರಳದ ತಿರುವನಂತಪುರಂನಲ್ಲಿರುವ ಏರಿಯಾಸ್ ಥಿಯೇಟರ್‌ ನಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗಿ ಕೆಲವೇ ಹೊತ್ತಿನಲ್ಲಿ ತಮಿಳ್ ರಾಕರ್ಸ್ ವೆಬ್ ಸೈಟ್ ನಲ್ಲಿ ಸಿಗುತ್ತಿತ್ತು. ಇದರಿಂದಾಗಿ ಸಿನಿಮಾ ನಿರ್ಮಾಪಕರಿಗೆ ತಮಿಳ್ ರಾಕರ್ಸ್​​ ವೆಬ್​ ಸೈಟ್​ ವಿಲನ್ ಆಗಿತ್ತು. ಪೈರಸಿಯಿಂದಾಗಿ ಥಿಯೇಟರ್ ಗೆ ಜನ ಬಾರದೇ ಜನರು ಮನೆಯಲ್ಲೇ ತಮಿಳ್ ರಾಕರ್ಸ್ ನಲ್ಲಿ ಸಿನಿಮಾ ಡೌನ್ ಲೋಡ್ ಮಾಡಿಕೊಂಡು ನೋಡುತ್ತಿದ್ದರು. ಹೀಗಾಗಿ ಥಿಯೇಟರ್ ಬಂದ ಸಿನಿಮಾಗಳು ಕೆಲವೇ ದಿನದಲ್ಲಿ ಥಿಯೇಟರ್ ನಿಂದ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿಗಳು ಬಂದಿದ್ದವು.

ಬಂಧಿಸಿದ್ದು ಹೇಗೆ?

ಕೇರಳದ ತಿರುವನಂತಪುರಂನಲ್ಲಿರುವ ಏರಿಯಾಸ್ ಥಿಯೇಟರ್‌ ನಲ್ಲಿ ನಟ ಧನುಷ್ ಅಭಿನಯದ ರಾಯನ್ ಚಿತ್ರ ಪ್ರದರ್ಶನವಾಗುತ್ತಿತ್ತು. ಈ ಚಿತ್ರಮಂದಿರದಲ್ಲಿ ಚಿತ್ರದ ರೆಕಾರ್ಡಿಂಗ್ ಮಾಡುತ್ತಿದ್ದಾಗ ಸ್ಟೀಫನ್ ರಾಜ್ ಸಿಕ್ಕಿ ಬಿದ್ದಿದ್ದಾನೆ.

ಸ್ಟೀಫನ್​ ಒಂದು ವರ್ಷಗಳಿಂದಲೂ ಹೊಸ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಮೊದಲಿಗೆ ಬರುತ್ತಿದ್ದನಂತೆ. ಸೀಟಿನಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಹೊಸ ಚಿತ್ರಗಳ ವಿಡಿಯೋ ತೆಗೆಯುತ್ತಿದ್ದ ಎಂದು ಹೇಳಿದ್ದಾನೆ. ಒಂದು ವರ್ಷದಿಂದಲೂ ಹೊಸ ಚಿತ್ರಗಳನ್ನು ಅಪ್‌ ಲೋಡ್ ಮಾಡುತ್ತಿದ್ದೇನೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಒಂದು  ಚಿತ್ರಕ್ಕೆ  5 ಸಾವಿರ ರೂಪಾಯಿ ಕಮಿಷನ್ ಪಡೆದು ವೆಬ್ ​ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ತಮಿಳ್ ರಾಕರ್ಸ್ ಅಂದ್ರೆ ಪೈರಸಿ ಫಂಟರ್ ಅಂತಲೇ ಕರೆಯಲ್ಪಡುತ್ತದೆ. ಎಷ್ಟು ಬಾರಿ ಈ ವೆಬ್ ಸೈಟ್ ನ್ನು ಬ್ಯಾನ್ ಮಾಡಿದರೂ ಮತ್ತೆ ಹೊಸ ಐಡಿಯಲ್ಲಿ ತಮಿಳ್ ರಾಕರ್ಸ್ ಬಂದು ನಿಲ್ಲುತ್ತಿತ್ತು. ಇದೀಗ ತಮಿಳ್ ರಾಕರ್ಸ್ ಅಡ್ಮೀನ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಚಿತ್ರ ನಿರ್ಮಾಪಕರ ನಿಟ್ಟುಸಿರು ಬಿಡುವಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version