ತಪ್ಪು ಉತ್ತರ ನೀಡುವ ವಿದ್ಯಾರ್ಥಿಗಳಿಂದ ಪೆಟ್ಟು ತಿನ್ನುವ ಶಿಕ್ಷಕ!: ಯಾರಿವರು ಮಾದರಿ ಶಿಕ್ಷಕ?

gopal
29/03/2024

ಶಿವಮೊಗ್ಗ: ಮಕ್ಕಳು ತಪ್ಪು ಮಾಡಿದ್ರೆ, ಅವರನ್ನು ನಿಂದಿಸಿ, ಬೆದರಿಸಿ, ಅವಮಾನಿಸಿ, ಹೊಡೆದು ಬುದ್ಧಿ ಕಲಿಸುವ ಕೆಲವು ಶಿಕ್ಷಕರಿಗೆ ಈ ಶಿಕ್ಷಕರೊಬ್ಬರು ಮಾದರಿಯಾಗುತ್ತಾರೆ. ಈ ಶಿಕ್ಷಕ ಮಕ್ಕಳಿಗೆ ವಿದ್ಯೆ ಕಲಿಸಲು, ಮಕ್ಕಳಿಂದ ತಾನೇ ಏಟು ತಿನ್ನುತ್ತಾರೆ.

ಶಿಕ್ಷಕ ಹೆಚ್.ಎಸ್.ಗೋಪಾಲ್ ಎಂಬವರು ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ತಾನು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ತಪ್ಪು ಉತ್ತರ ನೀಡಿದರೆ, ಅಂತಹ ವಿದ್ಯಾರ್ಥಿಗಳು ಕೋಲು ತೆಗೆದುಕೊಂಡು ಶಿಕ್ಷಕನ ಕೈಗೆ ಏಟು ಕೊಡಬೇಕು. ಶಿಕ್ಷಕರಿಗೆ ನಾವು ಹೊಡೆಯಬೇಕಾಗಲ್ಲ ಎನ್ನುವ ಬೇಸರದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಅನಿವಾರ್ಯವಾಗಿ ತೊಡಗಿಸಿಕೊಳ್ಳುತ್ತಾರೆ.

ಕಲಿಯದೇ ಇರುವುದು ಮಕ್ಕಳ ತಪ್ಪು ಎಂದೇ ಹೆಚ್ಚಿನ ಶಿಕ್ಷಕರು ಬಿಂಬಿಸಿಕೊಳ್ಳುತ್ತಾರೆ. ಕಲಿಯದೇ ಇರುವ ಮಕ್ಕಳೇ ತಮ್ಮ ತಪ್ಪಿಗೆ ಶಿಕ್ಷೆ ಪಡೆಯಬೇಕು ಎಂದು ಮನುವಾದೀಯ ಆಲೋಚನೆಗಳನ್ನು ಮಾಡುವ ಶಿಕ್ಷಕರ ನಡುವೆ, ವಿದ್ಯಾರ್ಥಿ ಕಲಿಯದಿದ್ದರೆ ಅದು ಶಿಕ್ಷಕನ ತಪ್ಪು ಮತ್ತು ಆ ತಪ್ಪಿಗೆ ಶಿಕ್ಷಕನೇ ಶಿಕ್ಷೆ ಅನುಭವಿಸಬೇಕು ಎನ್ನುವ ಹೊಸ ಯೋಚನೆಯೊಂದಿಗೆ ಈ ಪ್ರಜ್ಞಾವಂತ ಶಿಕ್ಷಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಉತ್ತಮ ಪ್ರತಿಫಲ ಸಿಗಬೇಕಾದರೆ ಹೊಸ ಪ್ರಯೋಗಕ್ಕೆ ನಾವು ಮುಂದಾಗಬೇಕು. ಈ ನಿಟ್ಟಿನಲ್ಲಿ ತಪ್ಪು ಉತ್ತರ ನೀಡುವ ವಿದ್ಯಾರ್ಥಿಗಳಿಂದಲೇ ಪೆಟ್ಟು ತಿನ್ನುವ ಪರಿಪಾಠ ಬೆಳೆಸಿಕೊಂಡಿರುವುದಾಗಿ ಮಾದರಿ ಶಿಕ್ಷಕ ಗೋಪಾಲ್ ಹೇಳುತ್ತಾರೆ.

ವಿದ್ಯಾರ್ಥಿಗಳಿಗೆ ಈ ಶಿಕ್ಷಕರೆಂದರೆ ಅಚ್ಚುಮೆಚ್ಚು. ಮೇಸ್ಟ್ರಿಗೆ ನಾವುಇ ಹೊಡೆಯಬೇಕಲ್ಲವೇ, ಇದು ಸಾಧ್ಯವಿಲ್ಲ ಎಂದು ಭಾವಿಸಿ ಎಲ್ಲ ಮಕ್ಕಳು ಸರಿಯಾದ ಉತ್ತರವನ್ನು ನೀಡುತ್ತಾರಂತೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version