ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಕಾಂಪೌಂಡ್ ಹಾರಿದ ಟೆಕ್ಕಿಗೆ ಸಿಕ್ತು ಕಳ್ಳನ ಪಟ್ಟ!

dogs attack
12/08/2025

ಬೆಂಗಳೂರು(Bangalore): ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಇದೀಗ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಹಾರಿದ ಟೆಕ್ಕಿಯೊಬ್ಬನಿಗೆ ಕಳ್ಳನ ಪಟ್ಟ ಸಿಕ್ಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೆಚ್ ಎಸ್ ಆರ್ ಲೇಔಟ್ ​ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿ ನಡೆದುಕೊಂಡು ಟೆಕ್ಕಿ ಹೋಗುತ್ತಿದ್ದ. ಇದೇ ವೇಳೆ ಬೀದಿ ನಾಯಿಗಳು ಟೆಕ್ಕಿಯನ್ನ ಅಟ್ಟಾಡಿಸಿಕೊಂಡು ಬಂದಿವೆ. ಕೂಡಲೇ ಕೆಲ ದೂರ ಓಡಿದ ಟೆಕ್ಕಿ, ಪಕ್ಕದಲ್ಲೇ ಇದ್ದ ಮನೆಯೊಂದರ ಕಾಂಪೌಂಡ್ ಹಾರಿದ್ದಾನೆ.

ಆಗ ಕಾಂಪೌಂಡ್ ಹಾರುತ್ತಿದ್ದಂತೆ ಮನೆಯಿಂದ ಆಚೆ ಬಂದ ಕುಟುಂಬ ಟೆಕ್ಕಿಯನ್ನ ಕಳ್ಳ ಎಂದು ಭಾವಿಸಿ ಹಿಡಿದುಕೊಂಡಿದ್ದಾರೆ. ಬಳಿಕ ಆತನ ಪೋನ್ ಕಿತ್ತುಕೊಂಡು ಪರಿಶೀಲನೆ ಮಾಡಿದ್ದಾರೆ. ನಂತರ ನೆರೆ ಹೊರೆಯವರೆಯಲ್ಲ ಸೇರಿ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.

ಇನ್ನೂ ತನಗೆ ಆದ ಅನುಭವವನ್ನು ಟೆಕ್ಕಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾಯಿಗಳಿಂದ ತಪ್ಪಿಸಿಕೊಂಡ ತಾನು ಮನೆಯವರ ಕೈಯಲ್ಲಿ ಲಾಕ್ ಆದೆ ಎಂದು ತಮ್ಮ ರೆಡಿಟ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version