1:52 AM Wednesday 21 - January 2026

ಕರಾಟೆ ಬೆಲ್ಟ್ ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಬಾಲಕಿ!

crime news
10/08/2021

ಥಾಣೆ: ವೈದ್ಯಕೀಯ ಕೋರ್ಸ್ ಗೆ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ 15 ವರ್ಷ ವಯಸ್ಸಿನ ಬಾಲಕಿಯೋರ್ವಳು ತನ್ನ ತಾಯಿಯ ಜೊತೆಗೆ ಜಗಳವಾಡಿ, ತಾಯಿಯನ್ನೇ ಹತ್ಯೆ ಮಾಡಿದ ಘಟನೆ ನಡೆದಿದ್ದು, ಕರಾಟೆ ಬೆಲ್ಟ್ ನಿಂದ ಕತ್ತು ಹಿಸುಕಿ ತಾಯಿಯನ್ನು ಕೊಂದಿದ್ದಾಳೆ.

ನವಿ ಮುಂಬೈ ಉಪನಗರದ ಐರೋಲಿ ಪ್ರದೇಶದಲ್ಲಿ ಜುಲೈ 30ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಯ ಸಂದರ್ಭ ಹೇಳಿಕೆ ನೀಡಿರುವ ಆರೋಪಿ ಬಾಲಕಿ ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿದ್ದಾಳೆ.

ತನ್ನ ಮಗಳು ವೈದ್ಯಕೀಯ ಪದವಿ ಮಾಡಬೇಕು ಎಂದು ತಾಯಿ ಹೇಳುತ್ತಿದ್ದು, ಇದು ಮಗಳಿಗೆ ಇಷ್ಟವಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ತಾಯಿ, ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಗಲಾಟೆ ಈ ಹಿಂದೊಮ್ಮೆ ತೀವ್ರಗೊಂಡು, ತಾಯಿಯ ವಿರುದ್ಧವೇ ಮಗಳು ದೂರು ದಾಖಲಿಸಿದ್ದಳು. ಈ ವೇಳೆ ಪೊಲೀಸರು ಮಾತುಕತೆ ನಡೆಸಿ ಕಳುಹಿಸಿದ್ದರು.

ಇನ್ನೂ ಘಟನೆ ನಡೆದ ದಿನ ತಾಯಿ ಮೇಲಿನಿಂದ ಬಿದ್ದ ಸತ್ತು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಆದರೆ, ಆ ಬಳಿಕ ಕರಾಟೆ ಬೆಲ್ಟ್ ನಿಂದ ಕತ್ತು ಹಿಸುಕಿ ಮಗಳೇ ಹತ್ಯೆ ಮಾಡಿರುವುದು ತಿಳಿದು ಬಂದಿತ್ತು. ಬಳಿಕ ಬಾಲಕಿಯನ್ನು ವಿಚಾರಿಸಿದಾಗ ಜಗಳದ ವೇಳೆ ಕರಾಟೆ ಬೆಲ್ಟ್ ನಿಂದ ಕತ್ತು ಹಿಸುಕಿದೆ ಎಂದು ಒಪ್ಪಿಕೊಂಡಿದ್ದಾಳೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ಬಂಧಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!

ಶೂಟಿಂಗ್ ವೇಳೆ ಫೈಟರ್ ಸಾವು: ಕೊನೆಗೂ ಮೌನ ಮುರಿದ ರಚಿತಾ ರಾಮ್

ಬಿಜೆಪಿಯಲ್ಲಿ ಅತೃಪ್ತಿಯ ಉರಿ: ದೆಹಲಿಯಲ್ಲಿ ಬೀಡು ಬಿಟ್ಟ ರಮೇಶ್ ಜಾರಕಿಹೊಳಿ ತಂಡ

“ಮಾತಾಡಿ ಪ್ರಧಾನಿಗಳೇ ಮಾತನಾಡಿ” | ಆ.10ರಿಂದ 15ರವರೆಗೆ ಆನ್ ಲೈನ್ ಅಭಿಯಾನ

ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ?

11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ನಟಿಯನ್ನು ಬಲಿ ಪಡೆದ ಕೊವಿಡ್ 19

ಇತ್ತೀಚಿನ ಸುದ್ದಿ

Exit mobile version