2:23 PM Thursday 11 - September 2025

ರೈಲು ಹತ್ತಲು ಓಡಿ ಹೋದ ವೇಳೆ ಯಡವಟ್ಟು: ಮಹಿಳೆಯನ್ನು ಕಾಪಾಡಿದ ಕಾನ್ಸ್ ಟೇಬಲ್

01/06/2023

ಚಲಿಸುತ್ತಿದ್ದ ರೈಲಿಗೆ ಓಡಿ ಹತ್ತಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕಿದ ಮಹಿಳೆಯನ್ನು ಸಾಹಸ ಪೂರ್ಣವಾಗಿ ಮಹಿಳಾ ಕಾನ್ಸ್ ಟೇಬಲ್ ರಕ್ಷಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೌದು. ರೈಲ್ವೆ ಸುರಕ್ಷತಾ ಪಡೆಯ ಮಹಿಳಾ ಕಾನ್ಸ್ ಟೇಬಲ್ ಕೆ. ಸನಿತ ಎಂಬುವವರು ಈ ಜೀವ ಉಳಿಸುವ ಕೆಲಸ ಮಾಡಿದ್ದು, ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ರೈಲು ಹತ್ತಲೆಂದು ಓಡಿದ ಮಹಿಳೆ ನಿಯಂತ್ರಣ ಕಳಕೊಂಡು ಇನ್ನೇನು ರೈಲು ಮತ್ತು ಫ್ಲಾಟ್ ಫಾರ್ಮ್ ನ ನಡುವೆ ಬೀಳುವುದರಲ್ಲಿ ಇದ್ದರು. ಆ ಸಂದರ್ಭದಲ್ಲಿ ಈ ಕಾನ್ಸ್ ಟೇಬಲ್ ಅವರನ್ನು ಧೈರ್ಯದಿಂದ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.

ತೆಲಂಗಾಣದ ಬೇಗಂ ಪೇಟ್ ರೈಲ್ವೆ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿಗೆ ಓಡಿ ಹತ್ತಲು ಮಹಿಳೆ ಪ್ರಯತ್ನಿಸುವುದು ಮತ್ತು ಆ ಸಂದರ್ಭದಲ್ಲಿ ಫ್ಲಾಟ್ ಫಾರ್ಮ್ ಗೆ ಮಹಿಳಾ ಕಾನ್ಸ್ ಟೇಬಲ್ ಬರುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಕಾನ್ಸ್ ಟೇಬಲ್ ಅವರ ಸಾಹಸಕ್ಕೆ ರೈಲ್ವೆ ಮುಖ್ಯಸ್ಥರು ಶ್ಲಾಘಿಸಿದ್ದಾರೆ ಮತ್ತು ಅಭಿನಂದಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version