ತೆಲುಗು ಚಿತ್ರಕ್ಕೆ ಕಾಲಿಟ್ಟ ಆ ದಿನಗಳು ಖ್ಯಾತಿಯ ನಟ ಚೇತನ್

05/12/2020

ಸಿನಿಡೆಸ್ಕ್: ಸದಾ ಸಾಮಾಜಿಕ ಕೆಲಸಗಳಿಗೆ ಸುದ್ದಿಯಾಗುತ್ತಿರುವ ನಟ ಚೇತನ್ ಅವರು ತೆಲುಗಿಗೆ ಎಂಟ್ರಿ ನೀಡಿದ್ದು,  ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆ ಕಾಣಲಿರುವ ಚಿತ್ರದಲ್ಲಿ ಚೇತನ್ ಅಭಿನಯಿಸಲಿದ್ದಾರೆ.

ಇನ್ನೂ ಹೆಸರಿಡದ ಚಿತ್ರದಲ್ಲಿ ಚೇತನ್ ಅವರು ಪೊಲೀಸ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮೊದಲ ಬಾರಿಗೆ ನಟ ಚೇತನ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಹಾಸ್ಯ ಮಿಶ್ರಿತ ವಿಭಿನ್ನ ಪಾತ್ರವನ್ನು ಮಾಡಲಿದ್ದಾರೆ.  ನಟ ಚೇತನ್ ಮಾತ್ರ ಈ ಚಿತ್ರದಲ್ಲಿ ಕನ್ನಡಿಗರಾಗಿದ್ದು, ಉಳಿದೆಲ್ಲ ನಟರು ತೆಲುಗಿನವರು ಆಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಸ್ಪಷ್ಟ ಮಾಹಿತಿಯಲ್ಲ.

ಇನ್ನೂ ಈ ಚಿತ್ರದ ಬಗ್ಗೆ ಮಾತನಾಡಿರುವ ನಟ ಚೇತನ್, ಈ ಸಿನಿಮಾದಲ್ಲಿ ನನ್ನದು ವಿಭಿನ್ನವಾದ ಪಾತ್ರ. ಹಿಂದೆಂದೂ ನಾನು ಇಂತಹಾ ಪಾತ್ರದಲ್ಲಿ ನಟಿಸಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ. ಈ ಚಿತ್ರದ ಮೂಲಕ ತೆಲುಗಿನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ಬಹಳಾ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version