10:57 AM Wednesday 20 - August 2025

ಟೆಂಪೋ ಮಗುಚಿ ಬಿದ್ದು 6 ವರ್ಷದ ಮಗು ಸಹಿತ ಮೂವರು ಬಲಿ

chithradurga
26/04/2021

ಚಿತ್ರದುರ್ಗ:  ಟೆಂಪೊವೊಂದು ಮಗುಚಿ ಬಿದ್ದ ಪರಿಣಾಮ 6 ವರ್ಷ ವಯಸ್ಸಿನ ಮಗು ಸೇರಿದಂತೆ  ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಹಿರಿಯೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಹಿರಿಯೂರು ನಿವಾಸಿಗಳಾಗಿರುವ 35 ವರ್ಷ ವಯಸ್ಸಿನ ಸೆಲ್ವಿ, 6 ವರ್ಷದ ಮಗು ದೀಪಿಕಾ 29 ವರ್ಷ ವಯಸ್ಸಿನ ನೀಲಮ್ಮ ಎಂಬವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರು ಕೂಲಿ ಕೆಲಸಕ್ಕೆಂದು ಟೆಂಪೋದಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಹಿರಿಯೂರು ಪಟ್ಟಣದ ಹೊರವಲಯ ತಲುಪುವಷ್ಟರಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version