10:10 AM Saturday 23 - August 2025

ಅಮೆರಿಕದ ನ್ಯೂಯಾರ್ಕ್ ‌ನಲ್ಲಿ ಫೆಲೆಸ್ತೀನ್ ಪರ ಹೋರಾಟ: ಬೈಡನ್ ಫೆಲೆಸ್ತೀನ್ ಗೆ ಬೆಂಬಲ ನೀಡುವಂತೆ ಆಗ್ರಹ

15/10/2023

ಇಸ್ರೇಲ್-ಫೆಲೆಸ್ತೀನ್ ಯುದ್ದದ ಕುರಿತು ವಿಶ್ವದಲ್ಲಿ ಪರ-ವಿರೋಧ ಪ್ರತಿಭಟನೆಗಳು, ಚರ್ಚೆಗಳು ಆರಂಭವಾಗಿವೆ. ಅಮೇರಿಕಾ, ಫ್ರಾನ್ಸ್ ಸೇರಿದಂತೆ‌ ಕೆಲವು ರಾಷ್ಟ್ರಗಳು ಇಸ್ರೇಲ್‌ ಪರ ನಿಂತಿದ್ರೆ ಇನ್ನು ಕೆಲ ದೇಶಗಳು ಫೆಲೆಸ್ತೀನ್ ಪರ ನಿಂತಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್‌ ನಗರದ ಪ್ರಮುಖ ಆಕರ್ಷಣೆ ಕೇಂದ್ರವಾದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಈ ಪ್ರತಿಭಟನೆ ನಡೆಯಿತು. ಫೆಲೆಸ್ತೀನ್ ಪರ ಬೆಂಬಲಿಗರು ಜತೆಯಾಗಿ ಫೆಲೆಸ್ತೀನ್ ಗೆ ಸ್ವಾತಂತ್ರ್ಯ ನೀಡಿ, ಫೆಲೆಸ್ತೀನ್ ವಿಮೋಚನೆ ಮಾಡಿ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಫೆಲೆಸ್ತೀನ್ ಭೂಮಿಯನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಪ್ರತಿಭಟನಾಕಾರರು ವಾದಿಸಿದ್ದು, ಫೆಲೆಸ್ತೀನಿಯನ್ನರ ಭೂಮಿಯನ್ನು ಅವರಿಗೆ ಮರಳಿಸುವಂತೆ ಆಗ್ರಹಿಸಿದರು.

ಇಸ್ರೇಲ್‌ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ. ಫೆಲೆಸ್ತೀನ್ ಜನರ ಮೇಲೆ ಆಕ್ರಮಣ ನಡೆಸಿದೆ. ಬೈಡನ್‌ ಸರ್ಕಾರ ಇಸ್ರೇಲ್‌ ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಇದೇ ವೇಳೆ ಆಗ್ರಹಿಸಿದರು.

ಇನ್ನು ಅಮೇರಿಕಾದಲ್ಲಿ ಇಸ್ರೇಲ್‌ ಪರ ಬೆಂಬಲಿಗರೂ ಸಹ ಬೀದಿಗಿಳಿದು ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದು, ಫೆಲೆಸ್ತೀನ್ ಪರ ಬೆಂಬಲಿಗರು ಮತ್ತು ಇಸ್ರೇಲ್‌ ಪರ ಬೆಂಬಲಿಗರ ನಡುವೆ ಪದೇ ಪದೇ ವಾಗ್ವಾದಗಳು ನಡೆದವು.

ಇತ್ತೀಚಿನ ಸುದ್ದಿ

Exit mobile version