2:15 AM Wednesday 15 - October 2025

ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿಯೇ ಕೊಂದ ಭೂಪ:  ಅಷ್ಟಕ್ಕೂ ಅಲ್ಲಿ ನಡೆದ್ದದ್ದೇನು ಗೊತ್ತಾ?

crit snek
13/08/2021

ಜಾಜ್ ಪುರ: ದಾರಿಯಲ್ಲಿ ತನ್ನಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಾವು ಕಚ್ಚಿದ್ದು, ಇದರಿಂದ ಆಕ್ರೋಶಗೊಂಡ ಆತ, ಹಾವನ್ನೇ ಕಚ್ಚಿ ಕಚ್ಚಿ ಕೊಂದು ಹಾಕಿದ ಘಟನೆ ಒಡಿಶಾದ ಜಾಜ್ ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಬುಡಕಟ್ಟು ನಿವಾಸಿ, 45 ವರ್ಷ ವಯಸ್ಸಿನ ಕಿಶೋರ್ ಭದ್ರ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ, ಆತನ ಕಾಲಿಗೆ ಹಾವು ಕಚ್ಚಿದೆ.

ಕಾಲಿಗೆ ಏನೋ ಕಚ್ಚಿದೆ ಎಂದು ಅರಿವಾಗುತ್ತಿದ್ದಂತೆಯೇ ಭದ್ರ, ಟಾರ್ಚ್ ಹಾಕಿ ಹುಡುಕಿದಾಗ ಅದೊಂದು ಕ್ರೈಟ್ ಹಾವು ಎಂದು ಆತನಿಗೆ ಗೊತ್ತಾಗಿದೆ. ಕೂಡಲೇ ಹಾವನ್ನು  ಹಿಡಿದ ಆತ ಹಾವನ್ನು ಕಚ್ಚಿ ಕಚ್ಚಿಯೇ ಸಾಯಿಸಿದ್ದು, ಬಳಿಕ ಸತ್ತ ಹಾವನ್ನು ಹಿಡಿದುಕೊಂಡು ತನ್ನ ಮನೆಗೆ ಹಿಂದುರುಗಿದ್ದಾನೆ.

ಇನ್ನೂ ಈ ಘಟನೆ ಆತನ ಸ್ನೇಹಿತರಿಗೆ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಹೋಗಲು ಅವರು ಹೇಳಿದ್ದಾರೆ. ಆದರೆ ಭದ್ರ ಅದನ್ನು ನಿರಾಕರಿಸಿದ್ದು, ಬಳಿಕ ಸಾಂಪ್ರದಾಯಿಕ ಚಿಕಿತ್ಸೆಯನ್ನು ಆತನಿಗೆ ಹಳ್ಳಿ ವೈದ್ಯರು ನೀಡಿದ್ದು, ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನಷ್ಟು ಸುದ್ದಿಗಳು…

ಪೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ?

ಕೋಟ್ಯಂತರ ರೂ. ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿಗೆ ಲಕ್ನೋ ಪೊಲೀಸರಿಂದ ನೋಟಿಸ್

ಸಹೋದರನೇ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ: ಪೊಲೀಸರ ಮೊರೆ ಹೋದ ಯುವತಿ

ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ, ಬಿಜೆಪಿ ಸಂಸ್ಕೃತಿ | ರಾಮಲಿಂಗಾರೆಡ್ಡಿ ತಿರುಗೇಟು

ಆಹಾರದಲ್ಲಿ ವಿಷ ಬೆರೆಸಿ ತಂದೆ, ಅಣ್ಣ, ತಂಗಿಯನ್ನು ಕೊಂದ 15 ವರ್ಷದ ಬಾಲಕಿ

ಇತ್ತೀಚಿನ ಸುದ್ದಿ

Exit mobile version