ತಂದೆ, ತಾಯಿಯ ಅಗಲಿಕೆ ಸಹಿಸದೇ ಸಾವಿಗೆ ಶರಣಾದ ಯುವಕ

ಹಿರಿಯಡ್ಕ: ತಂದೆ ತಾಯಿಯ ಅಗಲಿಕೆಯಿಂದ ಮನನೊಂದ ಯುವಕನೋರ್ವ ಮನೆಯ ಸಮೀಪದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಹೃದಯವಿದ್ರಾವಕ ಘಟನೆ ಹಿರಿಯಡಕದ ಪಂಡುಕಟ್ಟೆ ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು 22ವರ್ಷದ ಕೃತಿಕ್ ಎಂದು ಗುರುತಿಸಲಾಗಿದೆ. ಈತ ಪದವಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಈತನ ತಂದೆ ಐದು ತಿಂಗಳ ಹಿಂದೆ ಮರದಿಂದ ಬಿದ್ದು ಮೃತಪಟ್ಟಿದ್ದರು.
ಅಲ್ಲದೆ, ತಾಯಿ ಕೂಡ ಒಂದು ವರ್ಷ ಹಿಂದೆ ಮೃತಪಟ್ಟಿದ್ದರು. ತಂದೆ ತಾಯಿಯ ಅಗಲಿಕೆಯಿಂದ ಮಾನಸಿಕವಾಗಿ ಮನನೊಂದ ಈತ ಮನೆಯ ಹತ್ತಿರದ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. .ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka