7:12 PM Wednesday 17 - December 2025

ತಾನೇ ಸಾಕಿದ್ದ ಹಸುವಿಗೆ ಬಲಿಯಾದ ರೈತ

cow
13/04/2021

ಮೈಸೂರು: ರೈತನೊಬ್ಬ ತಾನೇ ಸಾಕಿದ್ದ ಹಸುವಿಗೆ  ಬಲಿಯಾಗಿರುವ  ಘಟನೆ  ನಂಜನಗೂಡು  ತಾಲೂಕಿನಲ್ಲಿ  ನಡೆದಿದ್ದು, ಮೇಯಿಸುತ್ತಿದ್ದ ವೇಳೆ ಹಸು ಇವರ ಹೊಟ್ಟೆಯ ಭಾಗಕ್ಕೆ ತಿವಿದ ಪರಿಣಾಮ ರೈತ ದಾರುಣವಾಗಿ ಸಾವನ್ನಪ್ಪಿದ್ದಾರೆ.

ನಂಜನಗೂಡು ತಾಲೂಕಿನ ಕೆ.ಆರ್. ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ಸಿದ್ದೇಗೌಡ (69) ಎಂಬವರು ಮೃತಪಟ್ಟವರಾಗಿದ್ದಾರೆ. ಹಸುವನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ಹಸುವು ಇವರ ಹೊಟ್ಟೆಯ ಭಾಗಕ್ಕೆ ಬಲವಾಗಿ ತಿವಿದಿದೆ.

ಹಸುವಿನ ತಿವಿತದಿಂದ ಗಂಭೀರವಾಗಿ ಗಾಯಗೊಂಡ ಸಿದ್ದೇಗೌಡರನ್ನು   ತಕ್ಷಣವೇ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

 

ಇತ್ತೀಚಿನ ಸುದ್ದಿ

Exit mobile version