ಶಾಲಾ ಬಾಲಕನನ್ನು ಹತ್ಯೆ ಮಾಡಿ ಚರಂಡಿಗೆಸೆದ ದುಷ್ಕರ್ಮಿಗಳು
ದೆಹಲಿಯ ಎಂಸಿಡಿ ಸರ್ಕಾರಿ ಶಾಲೆಯ ಬಳಿ, 8ನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ಪೊಲೀಸರು ಚರಂಡಿಯಲ್ಲಿ ಪತ್ತೆ ಹಚ್ಚಿದ್ದಾರೆ. ಮೃತ ಬಾಲಕನನ್ನು ಮೊಲರಬಂಡ್ ಗ್ರಾಮದ ಬಿಲಾಸ್ ಪುರ ಕ್ಯಾಂಪ್ ಸೌರಬ್ (12 )ಎಂದು ಗುರುತಿಸಲಾಗಿದೆ.
ರಾತ್ರಿ 8:20ರ ವೇಳೆ ಮಹಿಳೆಯೊಬ್ಬರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಇಬ್ಬರು ಹುಡುಗರು ಶಾಲಾ ವಿದ್ಯಾರ್ಥಿಯಾಗಿರುವ ಬಾಲಕನಿಗೆ ಥಳಿಸಿ ಶಾಲೆಯ ಬಳಿಯ ಚರಂಡಿಗೆ ಎಸೆದಿದ್ದಾರೆ ಮಾಹಿತಿ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ಶಾಲಾ ಸಮವಸ್ತ್ರದಲ್ಲಿ ಸುಮಾರು 12–13 ವರ್ಷ ವಯಸ್ಸಿನ ಬಾಲಕನ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಮೃತರ ದೇಹವನ್ನು ಏಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಬಾಲಕನ ಮೃತದೇಹವನ್ನು ಪರಿಶೀಲಿಸಿದಾಗ, ಆತನ ತಲೆಯಲ್ಲಿ ಅನೇಕ ಗಾಯಗಳು ಕಂಡುಬಂದಿದೆ. ಅದು ಮೊಂಡಾದ ವಸ್ತುವಿನಿಂದ ಉಂಟಾಗಿರಬಹುದು. ಘಟನಾ ಸ್ಥಳದಲ್ಲಿ ಶಾಲೆಯ ಬ್ಯಾಗ್ ಹಾಗೂ ನಾಲ್ಕೈದು ರಕ್ತಸಿಕ್ತ ಕಲ್ಲುಗಳು ಇರುವುದು ಕಂಡುಬಂದಿದೆ. ಈ ಕಲ್ಲುಗಳನ್ನು ಬಳಸಿ ಕೃತ್ಯ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ನಾವು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಆಗ್ನೇಯ ಜಿಲ್ಲೆಯ ಅಪರಾಧ ತಂಡವು ಅಪರಾಧದ ಸ್ಥಳವನ್ನು ಪರಿಶೀಲಿಸಿದೆ ಎಂದು ಅಧಿಕಾರಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























