4:13 AM Thursday 16 - October 2025

ದೇವಾಲಯಗಳಿಗೆ ನುಗ್ಗಿ ಹುಂಡಿ ಹಣ ದೋಚಿದ ಕಳ್ಳರು

chamarajanagara
09/09/2023

ದೇವಾಲಯಗಳ ಬಾಗಿಲು ಮೀಟಿ ಹುಂಡಿ ಹಣ ಕದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ನಿಟ್ರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಶ್ರೀ ಮಹಾದೇವಮ್ಮ ದೇಗುಲ ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಾಗಿಲು  ಮೀಟಿ ಒಳನುಗ್ಗಿರುವ ಕಳ್ಳರು ಹುಂಡಿಗಳನ್ನು ಒಡೆದು ಹಣವನ್ನು ದೋಚಿ ಹುಂಡಿಗಳನ್ನು ಬಿಸಾಡಿ ಹೋಗಿದ್ದಾರೆ.

ಅಂದಾಜು 40 ಸಾವಿರ ರೂ. ತನಕ ಹುಂಡಿಯಲ್ಲಿ ಸಂಗ್ರಹವಾಗಿತ್ತು ಎಂದು ತಿಳಿದುಬಂದಿದೆ. ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version