ಆಕೆಯನ್ನು ಪ್ರೀತಿಸಬೇಡ ಎಂದು ಅಪರಿಚಿತನಿಂದ ಧಮ್ಕಿ: ಯುವಕ ಸಾವಿಗೆ ಶರಣು

ಬೆಂಗಳೂರು: ಪ್ರೀತಿಸಿದ ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಹಾಗೂ ಅಪರಿಚಿತನೋರ್ವ ಬೆದರಿಕೆ ಹಾಕಿದ್ದರಿಂದ ಮನನೊಂದ ಯುವಕನೋರ್ವ ಸಾವಿಗೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.
ಹರ್ಷಿತ್ ಸಾವಿಗೆ ಶರಣಾದ ಯುವಕನಾಗಿದ್ದಾನೆ. ಬ್ಲೇಡ್ ನಿಂದ ಕೈಕೊಯ್ದುಕೊಂಡು ಬಳಿಕ ನೇಣುಬಿಗಿದುಕೊಂಡು ಯುವಕ ಸಾವಿಗೆ ಶರಣಾಗಿದ್ದಾನೆ.
ಒಂದೂವರೆ ವರ್ಷದಿಂದ ಆನೇಕಲ್ ನ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಹರ್ಷಿತ್ ತುಮಕೂರು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಮನೆಯವರಿಗೆ ತಿಳಿದು, ಆಕೆಯನ್ನು ಪ್ರೀತಿಸಬೇಡ ಎಂದು ಯುವತಿಯ ಅತ್ತೆ, ಮಾವ ಹರ್ಷಿತ್ ಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ನಡುವೆ ಅಪರಿಚಿತನೋರ್ವ ಕರೆ ಮಾಡಿ, ನಾನು ಆಕೆಯನ್ನು ಮದುವೆ ಆಗುತ್ತೇನೆ, ಆಕೆಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ನೊಂದ ಹರ್ಷಿತ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬ್ಲೇಡ್ ನಿಂದ ಕೈಕೊಯ್ದುಕೊಂಡು ಆ ಫೋಟೋವನ್ನು ತಾಯಿಗೆ ಮತ್ತು ಯುವತಿಯ ನಂಬರ್ ಕಳುಹಿಸಿದ್ದಾನೆ. ಆದ್ರೆ ಮನೆಗೆ ಬಂದು ನೋಡುವಷ್ಟರಲ್ಲಿ ಆತ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ, ಆಕೆಯ ಅತ್ತೆ ಮಾವ ಹಾಗೂ ಅಪರಿಚಿತ ನಂಬರ್ ನಿಂದ ಕರೆ ಮಾಡಿದ್ದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth