12:33 PM Wednesday 22 - October 2025

ಕೊಲೆ ಮಾಡಲು ಬಂದ ಶೂಟರ್ ನನ್ನು ಬೆನ್ನಟ್ಟಿ ಹಿಡಿದ ಟಿಎಂಸಿ ನಾಯಕ

16/11/2024

ಕೋಲ್ಕತಾದ ಕಸ್ಬಾ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ಸುಶಾಂತ ಘೋಷ್ ಅವರು ಕಳೆದ ರಾತ್ರಿ ಹತ್ಯೆ ಪ್ರಯತ್ನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ ನ ವಾರ್ಡ್ 108 ಅನ್ನು ಪ್ರತಿನಿಧಿಸುವ ಸುಶಾಂತ ಘೋಷ್ ಮಧ್ಯರಾತ್ರಿಯ ಸುಮಾರಿಗೆ ತಮ್ಮ ಮನೆಯ ಹೊರಗೆ ಕುಳಿತಿದ್ದಾಗ ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರು ಸ್ಕೂಟರ್‌ನಲ್ಲಿ ಬಂದಿದ್ದಾರೆ. ಇದೇ ವೇಳೆ ಓರ್ವ ವ್ಯಕ್ತಿಯು ಬಂದೂಕನ್ನು ಹೊರತೆಗೆದು ಘೋಷ್ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.

ಅಪಾಯವನ್ನು ಅರಿತುಕೊಂಡ ಘೋಷ್ ಆವಾಗ ಶೂಟರ್ ಮೇಲೆ ಗುಂಡು ಹಾರಿಸಿದ್ದಾರೆ. ಆಗ ದಾಳಿಕೋರರು ತಮ್ಮ ಸ್ಕೂಟರ್ ನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆಗ ಓರ್ವ ಆರೋಪಿಯು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಆಗ ಆತ ಎದ್ದು ಓಡಿದಾಗ ಘೋಷ್ ಬೆನ್ನಟ್ಟಿದ್ದಾರೆ.

ಕೊನೆಗೆ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಅಂತಿಮವಾಗಿ ಘೋಷ್ ಮತ್ತು ಅಲ್ಲಿ ನೆರೆದಿದ್ದ ಜನರ ನಡುವೆ ಸಿಕ್ಕಿಬಿದ್ದಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version