ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡೆಯಬೇಕಾದ್ರೆ ಒಂದೋ ಪುಡಿ ರೌಡಿ, ಇಲ್ಲ ರೇಪಿಸ್ಟ್ ಆಗಿರಬೇಕು: ಬಿ.ಕೆ.ಹರಿಪ್ರಸಾದ್

b k hariprasad
18/08/2025

ಬೆಂಗಳೂರು: ಬಿಜೆಪಿಯಲ್ಲಿ ಅಧಿಕಾರ, ಹುದ್ದೆಪಡಿಬೇಕು ಅಂದ್ರೆ ಒಂದೋ ಪುಡಿ ರೌಡಿಗಳಾಗಿರಬೇಕು, ಇಲ್ಲ ರೇಪಿಸ್ಟ್ ಆಗಿರಬೇಕೋ, ಕನಿಷ್ಟ ಪಕ್ಷ ಎರಡ್ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು. ಅಂತವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ ಬಿಜೆಪಿ ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಸ್ಪದವಲ್ಲ, ಯಾವ ನೈತಿಕತೆಯೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು,  ಬಿಜೆಪಿಯ ಅಧ್ಯಕ್ಷನೇ ಚೆಕ್ ಮೂಲಕ ಲಂಚ ಪಡೆದು ಹುದ್ದೆ ಗಿಟ್ಟಿಸಿಕೊಂಡಿರುವಾಗ, ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ ಉಳಿದವರದ್ದು ಯತಾ ರಾಜಾ, ತಥಾ ಪಟಾಲಂ ಅಲ್ವೇ ಅಂತ ಅವರು ಪ್ರಶ್ನಿಸಿದ್ದಾರೆ.

ಆರ್.ಎಸ್‌ಎಸ್ ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ದೇಶದ ಜನರಿಗೆ ಗೊತ್ತಿದೆ. ಆರ್.ಎಸ್.ಎಸ್ ಅಂತರಂಗಗಳು ನರಕದ ಗರ್ಭಗುಡಿಯೊಳಗೆ ಬಚ್ಚಿಟ್ಟಿದ್ದಕ್ಕಿಂತ, ಹೂತಿಟ್ಟಿದ್ದೇ ಹೆಚ್ಚು. ಇಂತಹ ಪಾತಕಿತನಗಳನ್ನು ಬಯಲು ಮಾಡುತ್ತಲೇ ಇರುತ್ತೇನೆ. ಎರಡು ರೂಪಾಯಿಯ ಗತಿಗೇಡಿ ಭಕ್ತರ ಅಪಪ್ರಚಾರಕ್ಕೆ ಕಿವಿಗೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version